ನಾಪೆÉÇÃಕ್ಲು, ನ. ೩: ನಾಪೋಕ್ಲು ಪಟ್ಟಣ ಮಡಿಕೇರಿ ತಾಲೂಕಿನ ಎರಡನೇ ದೊಡ್ಡ ಪಟ್ಟಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿ ಪದವಿ ಕಾಲೇಜು ಸೇರಿದಂತೆ ಸರಕಾರಿ, ಖಾಸಗಿ ಶಾಲಾ ಕಾಲೇಜುಗಳು ಬೇಕಾದಷ್ಟಿವೆ. ಅದರೊಂದಿಗೆ ನಾಪೋಕ್ಲು ವ್ಯಾಪ್ತಿಯಲ್ಲಿ ಹಲವು ಪ್ರವಾಸಿ ತಾಣಗಳು ಇದೆ. ಎಲ್ಲಿಗೆ ಸಾಗಬೇಕಾದರೂ ನಾಪೋಕ್ಲು ಪಟ್ಟಣದ ಮೂಲಕವೇ ಸಾಗಬೇಕು. ಬಸ್ಸು ಬದಲಾಯಿಸಲು, ವಿಶ್ರಾಂತಿ ಪಡೆಯಲು ಅವಶ್ಯ ಸಾಮಾನು ಖರೀದಿಸುವದು ಇಲ್ಲಿಯೇ ಆಗಬೇಕು. ಈ ಸಂದರ್ಭ ಶೌಚಾಲಯದ ಅಗತ್ಯ ಬಂದರೆ ಏನು ಮಾಡಬೇಕು ಎನ್ನುವದು ಇಲ್ಲಿ ಕಾಡುತ್ತಿರುವ ಪ್ರಶ್ನೆ. ಶಾಲಾ ಕಾಲೇಜು ಮಕ್ಕಳು, ಮಹಿಳೆಯರ ಗತಿ ಏನು ಎನ್ನುವದು ಪ್ರಶ್ನೆ. ಪಟ್ಟಣದ ಹೃದಯಭಾಗದಲ್ಲಿರುವ ಗ್ರಾಮ ಪಂಚಾಯಿತಿ ಕಟ್ಟಡದ ಹಿಂಬದಿಯಲ್ಲಿ ಸಾರ್ವಜ&divound;ಕ ಶೌಚಾಲಯ ಇದೆ. ಆದರೆ ಇದರಿಂದ ಯಾವದೇ ಪ್ರಯೋಜನವಿಲ್ಲ ಎನ್ನುತ್ತಾರೆ ಜನ. ಇದು ಒಂದೆಡೆ ದುರ್ನಾತ ಬೀರುತ್ತಿದೆ. ಇಲ್ಲಿ &divound;Ãರು ಕೂಡ ಇಲ್ಲ. ಎರಡು ದಿನಗಳಿಂದ ಈ ಶೌಚಾಲಯಕ್ಕೆ ಬೀಗ ಜಡಿಯಲಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೂಡ ಗಮನಹರಿಸುತ್ತಿಲ್ಲ ಎಂದು ದೂರುತ್ತಾರೆ ಸಾರ್ವಜ&divound;ಕರು.
ಸಂಬAಧಿಸಿದ ಅಧಿಕಾರಿಗಳು ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರವಾಸಿಗಳಿಗೆ, ಸಾರ್ವಜ&divound;ಕರಿಗೆ ಅನುಕೂಲ ಕಲ್ಪಿಸಿಕೊಡಬೇಕೆಂದು ಸಾರ್ವಜ&divound;ಕರು ಆಗ್ರಹಿಸಿದ್ದಾರೆ. -ಪ್ರಭಾಕರ್