ಸೋಮವಾರಪೇಟೆ,ನ.೩: ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ಕ್ರೀಡಾ ಸಮಿತಿ ವತಿಯಿಂದ ತಾ. ೧೭ರಂದು ಕುಶಾಲನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ದೊಡ್ಡ ವೀರರಾಜೇಂದ್ರ ಒಡೆಯರ್ ಸ್ಮಾರಕ ಜಿಲ್ಲಾ ಮಟ್ಟದ ವೀರಶೈವ ಲಿಂಗಾಯತ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಹೆಚ್.ವಿ. ಶಿವಪ್ಪ ತಿಳಿಸಿದ್ದಾರೆ.
ಅಂದು ಬೆಳಗ್ಗೆ ೯.೩೦ಕ್ಕೆ ಜಿಲ್ಲೆಯ ಮಠಾಧೀಶರುಗಳು ಹಾಗೂ ಗಣ್ಯರು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಪುರುಷರಿಗೆ ಕ್ರಿಕೆಟ್, ಮಹಿಳೆಯರಿಗೆ ಥ್ರೋ ಬಾಲ್ ಸ್ಪರ್ಧೆ ನಡೆಯಲಿದೆ. ಭಾಗವಹಿಸುವ ತಂಡಗಳು ತಾ. ೧೨ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕಿದೆ.
ಹಗ್ಗಜಗ್ಗಾಟ ಸ್ಪರ್ಧೆಗೆ ಸ್ಥಳದಲ್ಲೇ ತಂಡದ ಹೆಸರು ನೋಂದಾವಣೆ ಮಾಡಿಕೊಳ್ಳಬಹುದು. ಇದಲ್ಲದೆ ಎಲ್.ಕೆ.ಜಿ. ಯಿಂದ ೬೦ವರ್ಷ ಮೇಲ್ಪಟ್ಟವರಿಗೆ, ಬಾಲಕ, ಬಾಲಕಿ, ಪುರುಷ, ಮಹಿಳಾ ವಿಭಾಗಗಳಲ್ಲಿ ಪ್ರತ್ಯೇಕವಾಗಿ ವೈಯಕ್ತಿಕ ಕ್ರೀಡೆಗಳನ್ನು ಆಯೋಜಿಸಲಾಗಿದೆ.
ನವೆಂಬರ್ ೧೦ರÀಂದು ಷಟಲ್ ಬ್ಯಾಡ್ಮಿಂಟನ್ ಕ್ರೀಡಾಕೂಟ ಆಯೋಜಿಸಿದ್ದು ಕುಶಾಲನಗರದ ಹೆಚ್‌ಆರ್‌ಪಿ ಕಾಲೋನಿಯಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ೪೦ವರ್ಷದ ಒಳಪಟ್ಟು ಹಾಗೂ ೪೦ ವರ್ಷದ ಮೇಲ್ಪಟ್ಟ ಪುರುಷರಿಗೆ ಡಬಲ್ಸ್ ವಿಭಾಗದಲ್ಲಿ ಷಟಲ್ ಬ್ಯಾಡ್ಮಿಂಟನ್ ಕ್ರೀಡೆ ನಡೆಯಲಿದೆ. ಆಸಕ್ತರು ದಿನಾಂಕ ತಾ. ೮ ರೊಳಗಾಗಿ ಹೆಸರನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ.
ತಾ. ೧೭ ರಂದು ಬೆಳಿಗ್ಗೆ ೮.೩೦ಕ್ಕೆ ಕೊಪ್ಪಗೇಟ್ ಬಳಿ ಇರುವ ಕಾವೇರಿ ಪ್ರತಿಮೆ ಬಳಿಯಿಂದ ಕಾಲೇಜು ಮೈದಾನದವರೆಗೆ ಸ್ವಾಮೀಜಿಗಳೊಂದಿಗೆ ಕ್ರೀಡಾಜ್ಯೋತಿ ಸಹಿತ ಬೈಕ್ ಜಾಥಾ ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಮೊ: ೯೪೮೧೦೫೯೨೨೩, ೯೪೮೦೦೮೩೩೨೭, ೯೪೪೮೩೩೬೭೮೧, ೯೪೪೮೭೧೬೨೨೨ನ್ನು ಸಂಪರ್ಕಿಸಬಹುದಾಗಿದೆ.