ಸೋಮವಾರಪೇಟೆ, ನ .೪: ದೆಹಲಿಯ ತೀಸ್ ಹಜಾರಿ ನ್ಯಾಯಾಲಯ ಆವರಣದಲ್ಲಿ ಪೊಲೀಸರು, ವಕೀಲರ ಮೇಲೆ ದೌರ್ಜನ್ಯ ನಡೆಸಿರುವದು ಖಂಡನೀಯ ಎಂದು ಆರೋಪಿಸಿ ಇಲ್ಲಿನ ನ್ಯಾಯಾಲಯದ ವಕೀಲರುಗಳು, ಕಲಾಪ ಬಹಿಷ್ಕರಿಸಿದರು. ವಕೀಲರ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ದೇಶಾದ್ಯಂತ ವಕೀಲರುಗಳ ಸಂಘ ಖಂಡಿಸುತ್ತಿದೆ. ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂಘದ ಅಧ್ಯಕ್ಷ ಡಿ.ಕೆ. ತಿಮ್ಮಯ್ಯ ಹೇಳಿದರು. ಈ ಸಂದರ್ಭ ಉಪಾಧ್ಯಕ್ಷ ಕೆ.ಎಸ್. ಪದ್ಮನಾಭ್, ಕಾರ್ಯದರ್ಶಿ ಹೇಮಚಂದ್ರ, ಜಂಟಿ ಕಾರ್ಯದರ್ಶಿ ನವೀನ್, ವಕೀಲರುಗಳಾದ ಬಿ.ಈ. ಜಯೇಂದ್ರ, ಚನ್ನಬಸವಯ್ಯ, ಹೆಚ್.ಎಸ್. ಪ್ರಕಾಶ್, ಪೂವಯ್ಯ, ಪ್ರೀತಿ, ರೂಪ ಸೇರಿದಂತೆ ಇತರರು ಉಪಸ್ಥಿತರಿದ್ದರು.