ಮಡಿಕೇರಿ, ನ. ೩: ನಗರದ ಕ್ರಿಸ್ಟಲ್ ಕೋರ್ಟ್ ಸಭಾಂಗಣದಲ್ಲಿ ಹಿಂದೂ ಮಲೆಯಾಳಿ ಸಂಘದ ವತಿಯಿಂದ ಓಣಾ ಘೋಷಂ ಓಣಂ ಸದ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಕೊಡಗಿನ ದೇವಾಲಯ ಗಳಲ್ಲಿ ಸಂಪ್ರದಾಯದ ಆಚರಣೆ ನೆರವೇರಬೇಕಾದರೆ ಕೇರಳದ ತಂತ್ರಿಗಳ ಅವಶ್ಯಕತೆ ಇದೆ. ಕೊಡವ ಭಾಷೆಯಲ್ಲಿಯೂ ಕೆಲವು ಪದಗಳು ಮಲೆಯಾಳಿ ಮಿಶ್ರಿತಗೊಂಡಿದೆ. ವಿವಿಧ ವಿಚಾರಗಳಲ್ಲಿ ಕೊಡಗು, ಕೇರಳಕ್ಕೆ ಭಾವನಾತ್ಮಕ ನಂಟ್ಟಿದ್ದು, ಪರಿಸರ, ಜನ ಜೀವನದಲ್ಲಿ ಕೂಡ ಹೋಲಿಕೆ ಇದೆ. ವಿದ್ಯಾವಂತರ ನಾಡು ಎಂದು ಕರೆಸಿಕೊಳ್ಳುವ ಕೇರಳ ಮೂಲದವ ರಾಗಿರುವ ಮಲೆಯಾಳಿಗಳು ಶೈಕ್ಷಣಿಕ ಪ್ರಗತಿ ಸಾಧಿಸಿ ಉತ್ತಮ ಪ್ರಜೆಯಾಗಿ ದೇಶಕ್ಕೆ ಕೊಡುಗೆಯಾಗಬೇಕು ಎಂದು ಕರೆಯಿತ್ತರು. ವಿಧಾನ ಪರಿಷತ್ ಸದಸ್ಯ ಎಂ.ಪಿ ಸುನಿಲ್ ಸುಬ್ರಮಣಿ ಮಾತನಾಡಿ, ಹಿಂದೂ ಎಂದರೆ ಅಖಂಡ ಭಾರತದ ಪರಿಕಲ್ಪನೆ ಮೂಡುತ್ತದೆ. ಎಲ್ಲಾ ಆಚರಣೆಗಳನ್ನು ಪ್ರೀತಿಸುವ ಮನೋಭಾವ ಇರಬೇಕು. ಒಂದಾಗಿ ಸಮಾಜದ ಸ್ವಾಸ್ಥö್ಯ ಕಾಪಾಡಬೇಕು. ಸಂಸ್ಕೃತಿಯನ್ನು ಉಳಿಸುವದರ ಜತೆಗೆ ಯುವಜನಾಂಗಕ್ಕೆ ಅದನ್ನು ಪರಿಚಯಿಸಬೇಕು ಎಂದರು.
ಎAಎಲ್ಸಿ ವೀಣಾ ಅಚ್ಚಯ್ಯ ಮಾತನಾಡಿ, ಉತ್ತಮ ಸಮಾಜದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅಪಾರವಿದೆ. ಸ್ತಿçÃಯರಲ್ಲಿ ಸಾಮಾಜಿಕ ಕಾಳಜಿ ಇದ್ದರೆ ಮನೆ ಮಾತ್ರವಲ್ಲ ಇಡೀ ಸಮಾಜವೇ ಬದಲಾಗುತ್ತದೆ. ಜನಾಂಗದ ಪ್ರೀತಿಯನ್ನು ದುರುಪಯೋಗಪಡಿಸಿಕೊಳ್ಳದೆ ಅರ್ಥ ಪೂರ್ಣವಾಗಿ
(ಮೊದಲ ಪುಟದಿಂದ) ಬದುಕಬೇಕೆಂದು ಹೇಳಿದರು.
ಮಾಜಿ ಜಿ.ಪಂ. ಅಧ್ಯಕ್ಷ, ಸೋಮವಾರಪೇಟೆ ಮಲೆಯಾಳಿ ಸಮಾಜ ಅಧ್ಯಕ್ಷ ವಿ.ಎಂ. ವಿಜಯ ಮಾತನಾಡಿ, ಯುವಜನತೆ ಬೃಹತ್ ಕಂಪನಿ ಹಾಗೂ ಸರ್ಕಾರಿ ಉದ್ಯೋಗದ ಮೊರೆ ಹೋಗುತ್ತಿದ್ದು. ಪಾರಂಪರಿಕ ಹಾಗೂ ಸ್ವಉದ್ಯೋಗದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದೆ. ಇದು ಉತ್ತಮ ಬೆಳವಣಿಗೆ ಅಲ್ಲ ಎಂದರು.
ಸಂಘದ ಅಧ್ಯಕ್ಷ ಕೆ.ಎಸ್ ರಮೇಶ್ ಓಣಂ ಹಬ್ಬದಂದು ಕೊಡಗು ಜಿಲ್ಲೆಗೆ ಸೀಮಿತವಾಗಿ ಒಂದು ದಿನದ ಸರ್ಕಾರಿ ರಜೆ ಘೋಷಿಸುವಂತಾಗಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಮಲೆಯಾಳಿ ಬಾಂಧವರಿAದ ನೃತ್ಯ ಕಲೆಗಳು ಅನಾವರಣಗೊಂಡವು, ಕಾರ್ಯ ಕ್ರಮದಲ್ಲಿ ಪೂಕಳಂ ಮನಮೋಹಕ ವಾಗಿ ರಚಿಸಲ್ಪಟ್ಟಿದ್ದವು. ಬಳಿಕ ಸಾಮೂಹಿಕವಾಗಿ ಓಣಂ ಸದÀ್ಯ ಸೇವಿಸಲಾಯಿತು. ಬಗೆಬಗೆಯ ತಿನಿಸುಗಳು ಭೋಜನದಲ್ಲಿತ್ತು.
ನಿವೃತ್ತ ಪೊಲೀಸ್ ಅಧಿಕಾರಿ ಅಚ್ಯುತ್ತ ನಾಯರ್ ಅವರನ್ನು ಈ ಸಂದರ್ಭ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ಖಜಾಂಜಿ ಬಾಬು, ಗೌರವ ಸಲಹೆಗಾರ ಉಣ್ಣಿಕೃಷ್ಣ, ಓಣಂ ಆಚರಣಾ ಸಮಿತಿ ಅಧ್ಯಕ್ಷ ಜೀವನ್, ಮರಗೋಡು ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ಬಾಲಕೃಷ್ಣ ಕೆ.ಕೆ., ಗೋಣಿಕೊಪ್ಪ ಅಧ್ಯಕ್ಷ ಶರತ್ ಕಾಂತ್, ಕೂರ್ಗ್ ಮಲೆಯಾಳಿ ಅಸೋಸಿಯೇಷನ್ ಅಧ್ಯಕ್ಷ ಹರ್ಷವರ್ಧನ್, ನಂಜರಾಯಪಟ್ಟಣ ನವಚೈತನ್ಯ ಮಲೆಯಾಳಿ ಸಂಘದ ಅಧ್ಯಕ್ಷ ಪ್ರೇಮಾನಂದ ಸೇರಿದಂತೆ ಇನ್ನಿತರರು ಹಾಜರಿದ್ದರು.