ಕಣಿವೆ, ನ. ೩: ಪ್ರಮುಖ ಪ್ರವಾಸಿ ತಾಣ ದುಬಾರೆಯನ್ನು ಸಂಪರ್ಕಿಸುವ ಗುಡ್ಡೆಹೊಸೂರು-ನಂಜರಾಯಪಟ್ಟಣ ಮಾರ್ಗದ ರಸ್ತೆಯಲ್ಲಿ ಗುಂಡಿಗಳು ಮಾರ್ಪಟ್ಟು ಪ್ರವಾಸಿ ವಾಹನಗಳ ಸಹಿತ ಸ್ಥಳೀಯ ವಾಹನ ಸವಾರರು ಹಾಗೂ ಪ್ರಯಾಣಿಕರು ಹೈರಾಣಾಗುತ್ತಿ ದ್ದಾರೆ. ಈ ರಸ್ತೆಯಲ್ಲಿ ಪ್ರತಿ ದಿನ ಕನಿಷ್ಟ ಎಂದರೂ ಎರಡೂವರೆ ಸಾವಿರ ವಾಹನಗಳು ಸಂಚರಿಸುತ್ತವೆ. ವಾರಾಂತ್ಯದ ದಿನಗಳು ಹಾಗೂ ಸಾಲು ಸಾಲು ಸರ್ಕಾರಿ ರಜಾ ದಿನಗಳಲ್ಲಿ ಪ್ರವಾಸಿ ವಾಹನಗಳ ಸಾಲು ಇರುವೆಯ ಸಾಲಿನೋಪಾದಿ ಯಲ್ಲಿ ಇರುತ್ತದೆ. ಆದರೂ ಸಂಬAಧಿತ ಇಲಾಖೆಯವರು ಗುಂಡಿಗಳಿAದ ಆವೃತವಾಗಿರುವ ರಸ್ತೆಯ ಗುಂಡಿ ಮುಚ್ಚಲು ಮುಂದಾಗಿಲ್ಲ. ಈ ರಸ್ತೆಯಲ್ಲಿ ಒಂದು ಗುಂಡಿಯನ್ನು ತಪ್ಪಿಸಲು ಹೋದರೆ ವಾಹನಗಳ ಚಕ್ರಗಳು ಕನಿಷ್ಟ ಐದಾರು ಗುಂಡಿಗಳಲ್ಲಿ ಹತ್ತಿಳಿದಿರುತ್ತವೆ. ಕೆಲವು ಕಡೆ ಅಡಿಗಳಷ್ಟು ಆಳದ ಗುಂಡಿಗಳು ನಿರ್ಮಾಣವಾಗಿವೆ. ಕೂಡಲೇ ರಸ್ತೆಯ ಗುಂಡಿಗಳನ್ನು ತಾತ್ಕಾಲಿಕವಾಗಿ ಯಾದರೂ ಮುಚ್ಚಬೇಕು. ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಬೇಕೆಂದು ಗುಡ್ಡೆಹೊಸೂರು ಗ್ರಾ.ಪಂ. ಅಧ್ಯಕ್ಷೆ ಕೆ.ಎಸ್. ಭಾರತಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.