ವೀರಾಜಪೇಟೆ, ನ. ೪: ತೋಟದ ಲೈನ್ ಮನೆಯಲ್ಲಿ ದಾಸ್ತಾನು ಇರಿಸಲಾಗಿದ್ದ ಕಾಳು ಮೆಣಸು ಕಳ್ಳತನವೆಸಗಿ ಮಾರಾಟ ಮಾಡಲು ಯತ್ನಿಸುತ್ತಿದ್ದಾತನನ್ನು ಬಂಧಿಸಿ, ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ವೀರಾಜಪೇಟೆ ತಾಲೂಕಿನ ಕುಂಜಿಲ ಗ್ರಾಮದ ನಿವಾಸಿ ಖಾದರ್ ಅವರ ಪುತ್ರ ಹ್ಯಾರಿಸ್ (೪೦) ಕಾಳು ಮೆಣಸು ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರಿಂದ ಬಂಧಿತನಾಗಿದ್ದಾನೆ. ಕುಂಜಿಲ ಗ್ರಾಮದ ನಿವಾಸಿಯಾದ ಉದಿಯಂಡ ಸುಭಾಷ್ ಅವರ ಲೈನ್‌ಮನೆಯಲ್ಲಿ ಕಾಳು ಮೆಣಸುಗಳ ಚೀಲವನ್ನು ದಾಸ್ತಾನು ಇರಿಸಲಾಗಿತ್ತು. ಸುಭಾಶ್ ಮತ್ತು ಕುಟುಂಬದವರು ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಕಾಳು ಮೆಣಸಿನ ಚೀಲವನ್ನು ಕಳ್ಳತನವೆಸಗಲಾಗಿದೆ .ಕಾಳು ಮೆಣಸನ್ನು ಮಾರಾಟ ಮಾಡಲು ವೀರಾಜಪೇಟೆ ನಗರಕ್ಕೆ ತಂದಿದ್ದ ಹ್ಯಾರಿಸ್‌ನ ಕುರಿತ ಖಚಿತ ಮಾಹಿತಿ ಆಧಾರಿಸಿ ಮೆಣಸು ಮಾರಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ನಗರ ಪೊಲೀಸರು ಬಂಧಿತನಿAದ ೪೭ ಕೆ.ಜಿ., ರೂ. ೧೪ ಸಾವಿರ ಮೌಲ್ಯದ ಕಾಳು ಮೆಣಸು ಚೀಲವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಮೇಲೆ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ೩೭೯ ಐ.ಪಿ.ಸಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಲಾಗಿದೆ. ವೀರಾಜಪೇಟೆ ವೃತ್ತ ನೀರಿಕ್ಷಕ ಕ್ಯಾತೆಗೌಡ ಅವರ ಮಾರ್ಗದರ್ಶನ ದಲ್ಲಿ ನಗರ ಠಾಣಾಧಿಕಾರಿ ಎಂ.ಮರಿಸ್ವಾಮಿ ಅವರ ನಿರ್ದೇಶನದಲ್ಲಿ ಸಿಬ್ಬಂದಿ ಗಳಾದ ಕಾವೇರಮ್ಮ, ಸುನಿಲ್,ಗಿರೀಶ್‌ಮತ್ತು ಮಲ್ಲಿಕಾರ್ಜುನ್ ಕಾರ್ಯಾಚರಣೆ ಯಲ್ಲಿ ಭಾಗವಹಿಸಿದ್ದರು. -ಕೆ.ಕೆ.ಎಸ್.