ನಾಪೋಕ್ಲು, ನ. ೩: ಮಾನವೀಯ ಸಂದೇಶಗಳನ್ನು ಜಗಕ್ಕೆ ಸಾರಿದ ವಿಶ್ವ ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ೧೪೯೪ನೇ ಜನ್ಮ ದಿನದ ಕುರಿತು ಪ್ರಚಾರ ಪಡಿಸುವ ಸಲುವಾಗಿ ನಾಪೋಕ್ಲುವಿನಲ್ಲಿ ಈದ್ ಮಿಲಾದ್ ಸಂದೇಶ ಜಾಥಾ ನಡೆಯಿತು.
ನಾಪೋಕ್ಲು ಮತ್ತು ಎಮ್ಮೆಮಾಡು ರೇಂಜ್ ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ಜಂಟಿ ಆಶ್ರಯದಲ್ಲಿ ಜಾಥಾ ನಡೆಯಿತು. ನಾಪೋಕ್ಲು ಮತ್ತು ಎಮ್ಮೆಮಾಡು ರೇಂಜಿಗೊಳಪಟ್ಟ ಸುಮಾರು ೧೬ ಮದ್ರಸ ವಿದ್ಯಾರ್ಥಿಗಳ ದಫ್ ಮತ್ತು ಸ್ಕೌಟ್ಸ್ ಪ್ರದರ್ಶನ ಜಾಥಾದಲ್ಲಿ ಗಮನ ಸೆಳೆಯಿತು. ನಾಪೋಕ್ಲುವಿನ ರೇಂಜ್ ಸುನ್ನಿ ಜಂಇಯ್ಯತುಲ್ ,ಮೊಹಲ್ಲಾಗಳ ಆಡಳಿತ ಮಂಡಳಿ ಸದಸ್ಯರುಗಳು ಹಾಗೂ ಸಾರ್ವಜನಿಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.
- ಪ್ರಭಾಕರ್À