ಭಾಗಮಂಡಲ, ನ. ೩: ಭಾಗಮಂಡಲ ಗ್ರಾಮ ಪಂಚಾಯಿತಿ ಯಿಂದ ಬೇರ್ಪಟ್ಟು ಕಳೆದ ನಾಲ್ಕು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಅಯ್ಯಂಗೇರಿ ಗ್ರಾಮ ಪಂಚಾಯಿತಿಯು ಅಭಿವೃದ್ದಿ ಕಾರ್ಯಗಳಿಗೆ ಆದ್ಯತೆ ನೀಡದೆ ನಿದ್ರಾವಸ್ಥೆಯಲ್ಲಿದೆ ಎಂಬದಾಗಿ ಜನರು ಆರೋಪಿಸಿರುವದು ವಿಷಾದನೀಯ ಎಂದು ಪಂಚಾಯಿತಿ ಅಧ್ಯಕ್ಷರು ಹಾಗೂ ಪ್ರಮುಖರು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರುಗಳು ಮುಂದಿನ ೧೦ ದಿನಗಳೊಳಗಾಗಿ ಪಂಚಾಯಿತಿ ಆಡಳಿತ ಮಂಡಳಿಯವರು ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡದಿದ್ದಲ್ಲಿ ಪಂಚಾಯಿತಿ ಕಚೇರಿಗೆ ಪಕ್ಷಾತೀತವಾಗಿ ಮುತ್ತಿಗೆ ಹಾಕುವದಾಗಿ ಹೇಳಲಾಗಿದೆ ಆದರೆ, ಈಗಾಗಲೇ ಲಭ್ಯವಿರುವ ಅನುದಾನಕ್ಕೆ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದ್ದು ಕಾಮಗಾರಿಗಳು ನಡೆಯುತ್ತಿವೆ. ೨೦೧೯-೨೦ನೇ ಸಾಲಿನ ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದ್ದು, ಅನುಮೋದನೆ ದೊರೆತೊಡನೆ ಕಾಮಗಾರಿಗಳನ್ನು ಪ್ರಾರಂಭಿಸಲಾಗುವದೇ ಹೊರತು, ತಾವು ಹೇಳಿದಂತೆ ಇಲ್ಲದ ಅನುದಾನಕ್ಕೆ ೧೦ ದಿನಗಳೊಳಗಾಗಿ ಕಾಮಗಾರಿಗಳಿಗೆ ಚಾಲನೆ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.

ಪAಚಾಯಿತಿ ಅಭಿವೃದ್ದಿ ಅಧಿಕಾರಿ ಯವರನ್ನು ನೇಮಿಸುವ ಕೆಲಸ ಜಿಲ್ಲಾಡಳಿತಕ್ಕೆ ಸಂಬAಧಿಸದ ವಿಷಯ ವೆಂದು ಅರಿಯಬೇಕಾಗಿರುವ ತಾವುಗಳು, ಭಾಗಮಂಡಲ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಯವರು ಕಳೆದ ನಾಲ್ಕು ವರ್ಷಗ ಳಿಂದಲೂ ಅಯ್ಯಂಗೇರಿ ಪಂಚಾಯಿತಿ ಯಲ್ಲಿ ಪ್ರಭಾರ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯಾಗಿ ಕೆಲಸ ನಿರ್ವಹಿಸು ತ್ತಿದ್ದು, ಇದೀಗ ಜಿಲ್ಲಾ ಪಂಚಾಯಿತಿ ವತಿಯಿಂದ ಅಯ್ಯಂಗೇರಿ ಪಂಚಾಯಿತಿಗೆ ಕಾರ್ಯದರ್ಶಿ ಯವರನ್ನು ಸಹಾ ನೀಡಿರುತ್ತಾರೆ. ಇದಕ್ಕಾಗಿ ಆಡಳೀತ ಮಂಡಳಿ ಯವರಾದ ನಾವುಗಳು ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಯ ಸಂಬAಧಿಸಿದ ಅಧಿಕಾರಿಯವರುಗಳಿಗೆ ಈ ಮೂಲಕ ಧನ್ಯವಾದಗಳನ್ನು ತಿಳಿಸುತ್ತೇವೆ. ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಯವರಿಂದ ಅಭಿವೃದ್ಧಿ ಕೆಲಸಗಳಿಗೆ ಇದುವರೆಗೆ ಯಾವದೇ ರೀತಿಯ ತೊಡಕುಗಳಾಗಿರುವದಿಲ್ಲ ಎಂದು ವಿವರವಿತ್ತಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಪಡಿತರ ಪಡೆಯಲು ಬೆರಳಚ್ಚು ನೀಡಲು ಗ್ರಾಮ ಪಂಚಾಯಿತಿಗೆ ಸಂಬAಧಪಟ್ಟ ವಿಷಯವಾಗಿಲ್ಲ ವಾದ್ದರಿಂದ, ಗ್ರಾಮಸ್ಥರ ಒತ್ತಾಯದ ಮೇರೆಗೆ ಸೆಪ್ಟಂಬರ್ ತಿಂಗಳವರೆಗೆ ಪಂಚಾಯಿತಿ ಕಚೇರಿಯಲ್ಲಿ ಬೆರಳಚ್ಚು ನೀಡಲು ವ್ಯವಸ್ಥೆ ಮಾಡಲಾಗಿತ್ತು.

ಗ್ರಾಮದ ಅಭಿವೃದ್ದಿ ಬಗ್ಗೆ ಆಸಕ್ತಿವಹಿಸಿ ಪತ್ರಿಕಾ ಹೇಳಿಕೆ ನೀಡಿರುವಂತಹಾ ಪ್ರಮುಖರೇ ಕಳೆದ ಎರಡು ವರ್ಷಗಳಿಂದ ಪಂಚಾಯಿತಿಗೆ ನೀರಿನ ತೆರಿಗೆ/ ಮನೆ ಕಂದಾಯವನ್ನು ಪಾವತಿಸಿರುವದಿಲ್ಲ ಹಾಗೂ ಹಲವರು ಸರಿಯಾದ ಸಮಯದಲ್ಲಿ ಕಂದಾಯ ಪಾವತಿಸದಿರುವ ಕಾರಣ ಪಂಚಾಯಿತಿಗೆ ಸ್ವಂತ ಸಂಪನ್ಮೂಲ ಕಡಿಮೆ ಆಗುತ್ತಿದೆ. ಆದರೂ ಇತರ ಮನೆಯವರು ಸಕಾಲದಲ್ಲಿ ಪಾವತಿಸುತ್ತಿರುವ ತೆರಿಗೆ/ ಕಂದಾಯ ಮತ್ತಿತರ ಮೂಲಗಳಿಂದ ಕ್ರೋಡೀಕೃತವಾಗುತ್ತಿರುವ ಹಣದಲ್ಲಿ, ಕಚೇರಿ ನಿರ್ವಹಣೆ, ವೇತನ ಸೇರಿದಂತೆ ಸಣ್ಣಪುಟ್ಟ ತುರ್ತು ಕೆಲಸಗಳನ್ನು ಮಾಡಿಸಲಾಗುತ್ತಿದೆ. ಸರ್ಕಾರದಿಂದ ಬಿಡುಗಡೆಯಾದ ಹಣಕ್ಕೆ ಈ ಕೆಳಗಿನಂತೆ ಕ್ರಿಯಾ ಯೋಜನೆಯನ್ನು ಮಾಡಲಾಗಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ ಹಾಗೂ ಸರ್ಕಾರದ ಸುತ್ತೋಲೆಯಂತೆ ಬೀದಿ ದೀಪಗಳ ನಿರ್ವಹಣೆಗೆ ಗರಿಷ್ಠ ಶೇ. ೧೦ ಮಾತ್ರ ಮೀಸಲಿರಿಸ ಬಹುದಾಗಿದೆ. ಈ ಎಲ್ಲಾ ಕಾಮಗಾರಿ ಗಳನ್ನು ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಮಾಡಲಾಗಿದೆಯೇ ಹೊರತು, ಪಂಚಾಯಿತಿಯ ಆಡಳಿತ ಮಂಡಳಿಯವರ ವೈಯಕ್ತಿಕ ಕೆಲಸಕ್ಕಾಗಲೀ ಅಥವಾ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯವರ ವೈಯಕ್ತಿಕ ಕೆಲಸಕ್ಕಾಗಲಿ ಮಾಡಲಾಗಿರುವದಿಲ್ಲ ಎಂಬದಾಗಿ ತಿಳಿಸಿದ್ದಾರೆ.

ಮಹಾತ್ಮ ಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ೨೦೧೫-೧೬ನೇ ಸಾಲಿನಿಂದ ೨೦೧೯ರ ವರೆಗೆ ೩೧ ಲಕ್ಷದ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ.

೨೦೧೯-೨೦೨೦ನೇ ಸಾಲಿನ ೧೪ನೇ ಹಣಕಾಸು ಮತ್ತು ಶಾಸನ ಬದ್ದ ಅನುದಾನ ೨೩ ಲಕ್ಷಗಳ ಕ್ರಿಯಾ ಯೋಜನೆಗೆ ಅನುಮೋದನೆ ಹಂತದಲ್ಲಿರುತ್ತದೆ. ಸಣ್ಣಪುಲಿಕೋಟು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಅಲ್ಲದೇ, ಇತರೆ ಇಲಾಖೆ ಯಿಂದ ಅಂದಾಜು ಒಂದು ಕೋಟಿಯ ಕಾಮಗಾರಿಗಳನ್ನು ನಿರ್ವಹಿಸಲಾಗಿದೆ ಎಂದು ಪಂಚಾಯಿತಿ ಅಧ್ಯಕ್ಷರಾದ ಟಿ.ಎನ್. ಇಂದಿರಾ, ಉಪಾಧ್ಯಕ್ಷರಾದ ಪುಷ್ಪಾ, ಪಳ್ಳಿಲ್ ಮೊಹಮ್ಮದ್, ಕಡವಡಿರ ಸಂತೋಷ್ ಕುಮಾರ್, ಕುಯ್ಯಮುಡಿ ಮನೋಜ್ ಕುಮಾರ್, ಬಾರಿಕೆ ಪುಷ್ಪಾ, ಸುಮಿತ್ರ ಅವರು ತಿಳಿಸಿದ್ದಾರೆ.