ವೀರಾಜಪೇಟೆ, ನ. ೨: ಇದೇ ಪ್ರಥಮ ಭಾರಿಗೆ ವೀರಾಜಪೇಟೆ ಕೊಡವ ಕೇರಿ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ತಾ. ೫ರಂದು ವೀರಾಜಪೇಟೆ ಕೊಡವ ಸಮಾಜದಲ್ಲಿ ವೀರಾಜಪೇಟೆ ವಿಭಾಗದ ಕೊಡವ ಕೇರಿ ಮೇಳ - ೨೦೧೯ ನಡೆಯಲಿದೆ ಎಂದು ಮೇಳದ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ತಿಳಿಸಿದ್ದಾರೆ.

ನಗರದ ಪ್ರೆಸ್ ಕ್ಲಬ್‌ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹೇಶ್ ನಾಚಯ್ಯ ಈ ಸಾಂಸ್ಕೃತಿಕ ವೈಭವದ ಅದ್ಧೂರಿ ಕೊಡವ ಮೇಳಕ್ಕೆ ಪಟ್ಟಣದ ವ್ಯಾಪ್ತಿಯಲ್ಲಿರುವ ಏಳು ಕೊಡವ ಕೇರಿಯ ಜನಾಂಗ ಬಾಂಧವರಲ್ಲದೆ ನೆರೆ-ಕರೆ ಊರಿನವರು, ಹಲವು ಕೊಡವ ಸಮಾಜಗಳು, ಸಂಘ-ಸÀAಸ್ಥೆಗಳು ಸಹಕರಿಸಿದ್ದು, ಪಂಜರಪೇಟೆ ಕೊಡವ ಕೇರಿ ಮೇಳದ ಉಸ್ತುವಾರಿ ವಹಿಸಿಕೊಂಡಿದೆ. ಇಲ್ಲಿನ ಮಲೆತಿರಿಕೆ ಈಶ್ವರ ಕೊಡವ ಕೇರಿ, ಇಗ್ಗುತಪ್ಪ ಕೊಡವ ಕೇರಿ, ಕಾವೇರಿ ಕೊಡವಕೇರಿ, ಚಿಕ್ಕಪೇಟೆ ಕೊಡವಕೇರಿ, ಗಾಂಧಿನಗರ ಕೊಡವ ಒಕ್ಕೂಟ, ಕದನೂರು-ಕೊಟ್ಟೋಳಿ ಕೊಡವ ಸಂಘ ಅಲ್ಲದೆ ಅಖಿಲ ಕೊಡವ ಸಮಾಜ ಸಹಭಾಗಿಯಾಗಲಿದೆ ಎಂದು ಹೇಳಿದರು.

ಅಂದು ಬೆಳಿಗ್ಗೆ ೧೦ ಗಂಟೆಗೆ ಆರಂಭಗೊಳ್ಳುವ ಮೇಳವನ್ನು ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ನಾಪೋಕ್ಲು ಜೂನಿಯರ್ ಕಾಲೇಜು ಪ್ರಭಾರ ಪ್ರಾಂಶುಪಾಲೆ ಡಾ. ಬೊಜ್ಜಂಗಡ ಅವನಿಜ ಸೋಮಯ್ಯ ಆಗಮಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಅಡ್ಡಂಡ ಸಿ. ಕಾರ್ಯಪ್ಪ ಪಾಲ್ಗೊಳ್ಳಲಿದ್ದಾರೆ.

ಪಂಜರಪೇಟೆ ಕೊಡವಕೇರಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕೊಡವಕೇರಿ ಮೇಳದಲ್ಲಿ ‘ಕೊಡವಡ ಸಾಮಾಜಿಕ ಸ್ಥಿತಿಗತಿ ಪಿಞ್ಞ ನಾಳೆತ್‌ರ ಭವಿಷ್ಯ’ ವಿಷಯದ ಬಗ್ಗೆ ವಕೀಲ ಕುಂಬೆರ ರಮೇಶ್ ಅಯ್ಯಪ್ಪ ಹಾಗೂ ‘ಕೊಡವಡ ಚಾಚೆ-ಸಂಬAಧÀ ಪಿಞ್ಞ ಬೆಂದೂರ್ಥ’ ವಿಷಯದ ಬಗ್ಗೆ ನಿವೃತ್ತ ಉಪನ್ಯಾಸಕಿ ಚೇಮಿರ ದೇವಕಿ ಭೀಮಯ್ಯ ವಿಚಾರ ಮಂಡನೆ ಮಾಡಲಿರುವರು.

ಈ ಸಂದರ್ಭ ವಿವಿಧ ಕ್ಷೇತ್ರ‍್ರಗಳಲ್ಲಿ ನಾಯಡ ಸಿ. ನಂಜಪ್ಪ (ವಾಸು) (ಕ್ರೀಡಾಕ್ಷೇತ್ರ), ಮೇರಿಯಂಡ ಕೆ. ಪೂವಯ್ಯ (ಸಮಾಜ ಸೇವೆ), ಡಾ. ಪಾಲೆಕಂಡ ಕೆ. ಉತ್ತ್ತಪ್ಪ (ವೈದ್ಯಕೀಯ ಸೇವೆ), ನಾಯಕಂಡ ಬೇಬಿ ಚಿಣ್ಣಪ್ಪ (ಸಾಹಿತ್ಯ), ಚೇಮಿರ ಎಂ. ಭೀಮಯ್ಯ (ಶಿಕ್ಷಣ ಕ್ಷೇತ್ರ‍್ರ), ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ (ಕಾದಂಬರಿ), ಮಾಳೇಟಿರ ಶ್ರೀನಿವಾಸ್ (ನಿರೂಪಣೆ) ಇವರುಗಳನ್ನು ಸನ್ಮಾನಿಸÀಲಾಗುವದು.

ಮೇಳÀದಲ್ಲಿ ಆರ್ಜಿ ಗ್ರಾಮಸ್ಥರಿಂದ ಬಾಳೋಪಾಟ್, ಬೆಕ್ಕೆಸೊಡ್ಲೂರು ಮಂದತವ್ವ ಕೊಡವ ಸಾಂಸ್ಕೃತಿಕ ಟ್ರಸ್ಟ್ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಾಪೋಕ್ಲ್ ಕೊಡವ ಸಮಾಜದ ಪರವಾಗಿ ಬೊಳಕಾಟ್, ಚೆಯ್ಯಂಡಾಣೆ ಕೊಡವ ಸಮಾಜದಿಂದ ಕತ್ತಿಯಾಟ್, ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮೈಸೂರು ಕೊಡವ ಸಮಾಜದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಚೆಕ್ಕೆರ ಪಂಚಮ್ ಬೋಪಣ್ಣ, ಮಾಳೇಟಿರ ಅಜಿತ್ ತಂಡದವರು ಕೊಡವ ಪಾಟ್ ಆರ್ಕೆಸ್ಟಾç ನಡೆಸಿಕೊಡಲಿದ್ದಾರೆ.

ಗೋಷ್ಠಿಯಲ್ಲಿ ಮಲೆತಿರಿಕೆ ಈಶ್ವರ ಕೊಡವ ಸಂಘದ ಅಧ್ಯಕ್ಷ ನೆಲ್ಲವiಕ್ಕಡ ಉಮೇಶ್ ಮುತ್ತಣ್ಣ, ಇಗ್ಗುತಪ್ಪ ಕೊಡವ ¸ Àಂಘದ ಅಧ್ಯಕ್ಷ ಮಾದಂಡ ಕೆ. ಪೂವಯ್ಯ, ಕಾವೇರಿ ಕೊಡವ ಕೇರಿಯ ಕಾರ್ಯದರ್ಶಿ ನೆಲ್ಲಚಂಡ ಭೀಮಯ್ಯ, ಅಖಿಲ ಕೊಡವ ಸಮಾಜ ಕಾರ್ಯದರ್ಶಿ ಅಮ್ಮಣಿಚಂಡ ರಾಜ ನಂಜಪ್ಪ, ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಕಾರ್ಯದರ್ಶಿ ಬಯವಂಡ ಇಂದಿರಾ ಬೆಳ್ಯಪ್ಪ ಹಾಜರಿದ್ದರು.