ಮಡಿಕೇರಿ, ನ. 1: ಜಿಲ್ಲೆಯ ಮೂರು ತಾಲೂಕುಗಳಲ್ಲಿ 2018ನೇ ಸಾಲಿನಲ್ಲಿ ಸ್ವೀಕೃತವಾದ ಹೊಸ ಆನ್‍ಲೈನ್ ಪಡಿತರ ಚೀಟಿ ಅರ್ಜಿಗಳು ಅರ್ಜಿದಾರರು ಕಚೇರಿಗೆ ಬಾರದೇ ವಿಲೇವಾರಿಯಾಗಲು ಬಾಕಿ ಉಳಿದಿದ್ದು, ಆದ್ಯತೆ ಮೇರೆಗೆ ಈ ಅರ್ಜಿಗಳನ್ನು ತುರ್ತಾಗಿ ವಿಲೇವಾರಿ ಮಾಡಬೇಕಾಗಿದೆ. ಈ ಹಿನ್ನೆಲೆ ತಾ. 5 ರಿಂದ 30 ರವರೆಗೆ 2018ನೇ ಸಾಲಿನ ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲು ಉದ್ದೇಶಿಸಲಾಗಿದೆ ಹಾಗೂ 2018 ನೇ ಸಾಲಿನಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ಅರ್ಜಿದಾರರು ಮಾತ್ರ ಈ ಅವಧಿಯಲ್ಲಿ ಆಯಾಯ ತಾಲ್ಲೂಕು ಕಚೇರಿಗೆ ಬಂದು ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪಡಿತರ ಚೀಟಿಯನ್ನು ತುರ್ತಾಗಿ ಪಡೆದುಕೊಳ್ಳಲು ತಿಳಿಸಿದೆ.
2019ನೇ ಸಾಲಿನಲ್ಲಿ ಸಲ್ಲಿಸಿದ ಪಡಿತರ ಚೀಟಿ ಅರ್ಜಿದಾರರು ಡಿಸೆಂಬರ್-2019ರ ಮಾಹೆಯಿಂದ ಪಡಿತರ ಚೀಟಿಯನ್ನು ಪಡೆದುಕೊಳ್ಳಲು ತಿಳಿಸಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ಗೌರವ್‍ಕುಮಾರ್ ಕೋರಿದ್ದಾರೆ.