ಮಡಿಕೇರಿ, ನ. 1: ನಿವೃತ್ತ ಯೋಧರ ಒಕ್ಕೂಟ ಅರೆಸೇನಾಪಡೆ ಕೊಡಗು ಜಿಲ್ಲೆ ಇದರಲ್ಲಿ ಬಿ.ಎಸ್.ಎಫ್., ಸಿ.ಆರ್.ಪಿ.ಎಫ್., ಸಿ.ಐ.ಎಸ್.ಎಫ್. ಮತ್ತು ಐ.ಟಿ.ಬಿ.ಪಿ.ಎಫ್.ನ ನಿವೃತ್ತ ಯೋಧರು ಜಿಲ್ಲಾದ್ಯಂತ ಸದಸ್ಯರಾಗಿದ್ದಾರೆ. ಇದರ ವಾರ್ಷಿಕ ಮಹಾಸಭೆಯನ್ನು ತಾ. 5 ರಂದು ಬೆಳಿಗ್ಗೆ 10.30 ಗಂಟೆಗೆ ಮಡಿಕೇರಿಯ ಕೆಳಗಿನ ಗೌಡ ಸಮಾಜದಲ್ಲಿ ಆಯೋಜಿಸಲಾಗಿದೆ. ಸಂಘದ ಸದಸ್ಯರು ಪಾಲ್ಗೊಂಡು ಅಗತ್ಯತೆಗಳ ಸೌಲಭ್ಯ ಪಡೆಯಲು ಮನವಿ ಮಾಡಲಾಗಿದೆ.