ಸೋಮವಾರಪೇಟೆ, ನ. ೨: ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸ್ವಚ್ಛತೆ ಕೆಲಸ ನಿರ್ವಹಿಸುತ್ತಿದ್ದ ನಾನ್ ಕ್ಲಿನಿಕ್ ಹಾಗೂ ಡಿ.ಗ್ರೂಪ್‌ನ ನಾಲ್ಕು ಮಂದಿಯನ್ನು ಗುತ್ತಿಗೆದಾರರು ಕೆಲಸದಿಂದ ಏಕಾಏಕಿ ತೆಗೆದು ಹಾಕಿದ್ದು, ತಕ್ಷಣ ಇವರನ್ನು ಮರುನೇಮಕ ಮಾಡದಿದ್ದರೆ ತಾ. ೪ ರಂದು ಆಸ್ಪತ್ರೆ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಗುವದು ಎಂದು ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ಎಂ. ಸೋಮಪ್ಪ ಹೇಳಿದರು.

ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಯನ್ನು ಸ್ವಚ್ಛತೆ ಮಾಡುವವರ ಶೋಷಣೆ ಮಾಡಲಾಗುತ್ತಿದೆ. ಎರಡು ತಿಂಗಳಿನಿAದ ಗುತ್ತಿಗೆದಾರರು ಸಂಬಳ ನೀಡಿಲ್ಲ. ಅನ್ಯಾಯದ ವಿರುದ್ಧ ನೌಕರರು ಪ್ರಶ್ನೆ ಮಾಡಿದರೆ ಕೆಲಸದಿಂದ ತೆಗೆಯುತ್ತಿದ್ದಾರೆ ಎಂದು ಆರೋಪಿಸಿದರು.

ಭಾನುವಾರ ಸಂಜೆಯ ಒಳಗೆ ನೌಕರರನ್ನು ಮರುನೇಮಕ ಮಾಡಬೇಕು. ತಪ್ಪಿದಲ್ಲಿ ಸೋಮವಾರ ಬೆಳಿಗ್ಗೆಯಿಂದ ವಜಾಗೊಂಡ ನೌಕರರು ಹಾಗೂ ಸಂಘಟನೆ ಪದಾಧಿಕಾರಿಗಳೊಂದಿಗೆ ಉಪವಾಸ ಸತ್ಯಾಗ್ರಹ ನಡೆಸಲಾಗುವದು ಎಂದು ಎಚ್ಚರಿಸಿದರು.

ದುಡಿಯುವ ವರ್ಗದವರನ್ನು ಗೌರವದಿಂದ ನಡೆಸಿಕೊಳ್ಳಬೇಕು. ಕೇಂದ್ರ ಸರ್ಕಾರದ ಸ್ವಚ್ಛ್ ಭಾರತ್ ಅಭಿಯಾನ ಸಾಕಾರಗೊಳ್ಳಬೇಕಾದರೆ ಸ್ವಚ್ಛತೆ ಕಾರ್ಮಿಕರ ಸೇವೆ ಅಪಾರವಾದುದು. ಅಂತಹವರನ್ನು ಕೆಲಸದಿಂದ ವಜಾ ಮಾಡದೆ, ಖಾಯಂಗೊಳಿಸಬೇಕೆAದು ಆಗ್ರಹಿಸಿದರು.

ಕಳೆದ ೨೦ ವರ್ಷಗಳಿಂದ ನಾನ್ ಕ್ಲಿನಿಕಲ್ ಕೆಲಸ ನಿರ್ವಹಿಸುತ್ತಿದ್ದ ನಮ್ಮನ್ನು ಕೆಲಸದಿಂದ ತೆಗೆದಿರುವ ದರಿಂದ ಸಂಕಷ್ಟಕ್ಕೆ ಸಿಲುಕಿದ್ದೇವೆ. ಊಟಕ್ಕೂ ಕಷ್ಟವಾಗಿದೆ. ನಮ್ಮ ಕುಟುಂಬ ಬೀದಿಪಾಲಾಗಲಿದೆ. ನಮಗೆ ಬೇರೆ ವೃತ್ತಿ ಗೊತ್ತಿಲ್ಲ. ಕೆಲಸ ಕೊಡುವ ತನಕ ಪ್ರತಿಭಟನೆ ಮಾಡುತ್ತೇವೆ ಎಂದು ಕೆಲಸ ಕಳೆದುಕೊಂಡಿರುವ ಶಶಿ, ರಾಣಿ, ನಿರ್ಮಲ, ಸುಬ್ಬಯ್ಯ ಅವರುಗಳು ಅಳಲು ತೋಡಿಕೊಂಡರು.