ಮಡಿಕೇರಿ, ನ. 1: ದೇವಾಟ್ ಪರಂಬು ಹತ್ಯಾಕಾಂಡ ಖಂಡಿಸಿ ಈ ಸಂಬಂಧ ಫ್ರೆಂಚ್ ಸರಕಾರ ಕೊಡವರ ಕ್ಷಮೆಯಾಚನೆ ಮಾಡಬೇಕೆಂಬದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ನವ ದೆಹಲಿಯಲ್ಲಿರುವ ಫ್ರೆಂಚ್ ರಾಯಭಾರಿ ಕಚೇರಿ ಎದುರು ಶಾಂತಿಯುತ ಸತ್ಯಾಗ್ರಹ ನಡೆಸಲಾಯಿತು.ನವದೆಹಲಿಯಲ್ಲಿ ತೀನ್ ಮೂರ್ತಿ ಭವನದಿಂದ ಮೆರವಣಿಗೆ ಹೊರಟು ಚಾಣಕ್ಯಪುರಿಯಲ್ಲಿರುವ ಫ್ರೆಂಚ್ ರಾಯಭಾರ ಕಚೇರಿ ಎದುರು ಸತ್ಯಾಗ್ರಹ ನಡೆಸಲಾಯಿತು. (ಮೊದಲ ಪುಟದಿಂದ) ನಂತರ ಕಾನ್ಸುಲೇಟ್ ಜನರಲ್ ಆಫ್ ಫ್ರಾನ್ಸ್‍ನ ಸೋಫಿ ಗೌಟಿಯಾರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಅವರ ಮುಂದಾಳತ್ವದಲ್ಲಿ ನಡೆದ ಸತ್ಯಾಗ್ರಹದಲ್ಲಿ ಸದಸ್ಯರಾದ ಕಲಿಯಂಡ ಪ್ರಕಾಶ್, ಪುಲ್ಲೇರ ಕಾಳಪ್ಪ, ಪುಲ್ಲೇರ ಸ್ವಾತಿ ಕಾಳಪ್ಪ, ಅಜಿಕುಟ್ಟೀರ ಲೋಕೇಶ್, ಜಮ್ಮಡ ಮೋಹನ್, ಮದ್ರೀರ ಕರುಂಬಯ್ಯ, ಚಿಮ್ಮಣಮಾಡ ರಾಜ, ಕಾಟುಮಣಿಯಂಡ ಉಮೇಶ್, ಕಾಂಡೇರ ಸುರೇಶ್, ನಂದಿನೆರವಂಡ ವಿಜು, ಚಂಗಂಡ ಚಮಿ, ಲೆಫ್ಟಿನೆಂಟ್ ಕರ್ನಲ್ ಬಿ ಎಂ ಪಾರ್ವತಿ, ಮೇಚಂಡ ಕಿಶಾ, ಬೋಸ್ ಪಾರುವಂಗಡ, ದಿಲನ್ ಕರ್ತಾಂಡ, ಮಾಚಿಮಡ ಲವ, ಬೊಟ್ಟಂಗಡ ಜಪ್ಪು ಇವರುಗಳು ಭಾಗವಹಿಸಿದ್ದರು.