ವೀರಾಜಪೇಟೆ ನ:1ಸುಭದ್ರ ಕರ್ನಾಟಕದ ನಿರ್ಮಾಣಕ್ಕೆ ಭದ್ರ ಅಡಿಪಾಯವನ್ನು ಹಾಕಿಕೊಡುವಲ್ಲಿ ಸರ್,ಎಂ ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮಾಯಿಲ್, ದಿವಾನ್ ಪೂರ್ಣಯ್ಯನಂಥ ಆಡಳಿತಗಾರರ ಪಾತ್ರ ಮಹತ್ತರವಾದದ್ದು ಎಂದು ಪ್ರಭಾರ ತಹಶೀಲ್ದಾರ್ ಮಹೇಶ್ ಹೇಳಿದರು.ವೀರಾಜಪೇಟೆಯ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತದ ಸಂಯುಕ್ತ ಆಶ್ರಯದಲ್ಲಿ 64ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜರೋಹಣಾ ನೆರವೇರಿಸಿ ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಕನ್ನಡ ನಾಡು ನುಡಿಗಾಗಿ ಶ್ರಮಿಸಿದ ಹಿರಿಯ ಚೇತನಗಳನ್ನು ಸ್ಮರಿಸಿ ಅವರುಗಳನ್ನು ಗೌರವಿಸುವ ದಿನವಾಗಿದೆ ಎಂದು ಬಣ್ಣಿಸಿದರು. ವಿಶ್ವವನ್ನೇ ಬೆರಗುಗೊಳಿಸುವ ಶ್ರವಣಬೆಳಗೊಳದ ಭವ್ಯ ಗೊಮ್ಮಟೇಶ್ವರ, ಬೇಲೂರಿನ (ಮೊದಲ ಪುಟದಿಂದ) ಶಿಲ್ಪಕಲೆ, ಬಾದಾಮಿಯ ಗುಹಾಂತರ ದೇವಾಲಯ, ಪಟ್ಟದ ಕಲ್ಲು, ಐಹೊಳೆ, ಹಳೇಬೀಡು, ಸೋಮನಾಥಪುರ, ಶೃಂಗೇರಿ, ಹಂಪೆಯಲ್ಲಿನ ಗುಡಿಗಳು, ಬಿಜಾಪುರದ ಮುಸ್ಲಿಂ ಕಲಾಕೃತಿಗಳು, ಬಹು ಸಂಸ್ಕøತಿಯ ಹಾಗೂ ಸಾವiರಸ್ಯದ ಕುರುಹುಗಳಾಗಿದೆ ಎಂದು ನೆನಪಿಸಿದರು. ಕರ್ನಾಟಕದ ಸಂಗೀತವನ್ನು ಪ್ರಪಂಚಕ್ಕೆ ನೀಡಿದ ಪುಣ್ಯಭೂಮಿ ಕನ್ನಡ ನಾಡಾಗಿದೆ. ಯಕ್ಷಗಾನ, ನೃತ್ಯ, ನಾಟಕಗಳಲ್ಲಿಯು ಕರ್ನಾಟಕದ ಕೊಡುಗೆ ಅಪಾರ. ಹದಿನಾರನೇ ಶತಮಾನದವರೆಗಿನ ಕರ್ನಾಟಕದ ಇತಿಹಾಸ ರೋಮಾಂಚನಕಾರಿ ಹಾಗೂ ಸಾಹಸ ಕಥೆಗಳ ಸರಣಿ ಎಂದೇ ತಿಳಿಯಬಹುದಾಗಿದೆ. ವೀರ ಅರಸರುಗಳ ಕನ್ನಡದ ನಾಡಾಗಿ ಜಗತ್ತಿನಲ್ಲೇ ಪ್ರಖ್ಯಾತಗೊಂಡಿದೆ. ಪಂಪ, ದುರ್ಗ ಸಿಂಹರಂತಹ ಕವಿಗಳು, ಕಲಿಗಳು ಆಗಿದ್ದರು. ಇಮ್ಮಡಿ ಪುಲಿಕೇಶಿ, ವಿಷ್ಣುವರ್ಧನ, ಕೃಷ್ಣ ದೇವರಾಯ, ಕಿತ್ತೂರು ರಾಣಿ ಚೆನ್ನಮ್ಮ, ಬೆಳವಾಡಿ ಮಲ್ಲಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ, ವೀರ ಮದಕರಿ ನಾಯಕ ಇವರ ಹೆಸರುಗಳು ಹೇಡಿಯಲ್ಲೂ ಕಲಿತನವನ್ನು ಹುರಿ ಮಾಡುವ ಶಕ್ತಿ ಹೊರ ಹೊಮ್ಮಿದೆ ಎಂದು ಬಣ್ಣಿಸಿದರು.
ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಷಣ್ಮುಗ ಮಾತನಾಡಿ, ಕನ್ನಡ ಭಾಷೆಗೆ 2500 ವರ್ಷಗಳಿಗೂ ಅಧಿಕ ಇತಿಹಾಸ ಇದೆ. ಭಾಷೆಗೆ ಧಕ್ಕೆ ಬರುವ ರೀತಿಯಲ್ಲಿ ನಾವು ನಡೆದುಕೊಳ್ಳಬಾರದು. ಕನ್ನಡ ಭಾಷೆಯ ಬಗ್ಗೆ ಶ್ರದ್ದೆ ಭಕ್ತಿ, ಗೌರವ ಹೊಂದಿಕೊಳ್ಳಬೇಕು ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಮಧೂಶ್ ಪೂವಯ್ಯ, ತೂಕ್‍ಬೊಳಕ್ ಸಂಸ್ಕøತಿ ಕಲೆ, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಶಂಕರಿ ಪೊನ್ನಪ್ಪ ಮಾತನಾಡಿದರು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈ¯ ಬಿಳಗಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್, ಡಿ.ವೆ.ೈಎಸ್.ಪಿ ಜಯಕುಮಾರ್, ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾದಪಂಡ ಕಾಶಿ ಕಾವೇರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಶಾಲೆಗಳ ಸ್ತಬ್ದ ಚಿತ್ರಗಳಲ್ಲಿ ಇಲ್ಲಿನ ತೆಲುಗರ ಬೀದಿಯ ಕೂರ್ಗ್ ವ್ಯಾಲಿ ಶಾಲೆಯ ಕರ್ನಾಟಕವನ್ನು ಆಳಿದ ರಾಜರುಗಳು ಹಾಗು ಪ್ರಮುಖರ ಒಳಗೊಂಡ ಸ್ತಬ್ದಚಿತ್ರ (ಪ್ರಥಮ) , ತ್ರೀವೇಣಿ ಶಾಲೆಯ ವಚನಕಾರರ (ದ್ವಿ), ಬ್ರೈಟ್ ಪಬ್ಲಿಕ್ ಶಾಲೆಯ ಕನ್ನಡಕ್ಕೆ ಹೋರಾಟ ಮಾಡಿದ ವೀರರು (ತೃ) ಸ್ಥಾನ ಪಡೆದು ಕೊಂಡಿತು. ಪೊಲೀಸ್ ಸ್ಕೌಟ್ಸ್, ಗೈಡ್ಸ್ ಮಕ್ಕಳಿಂದ ಪಥ ಸಂಚಲನ ನಡೆಯಿತು.