ಮಡಿಕೇರಿ, ನ. 1: ಜಿಲ್ಲೆಯಲ್ಲಿ ರಕ್ಷಣಾ ಮದ್ಯ ಬಳಸುವಂತಿಲ್ಲ ಎಂದು ಅಬಕಾರಿ ಇಲಾಖೆ ಆದೇಶಿಸಿರುವದನ್ನು ಕೊಡಗು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕಟ್ಟಿಮಂದಯ್ಯ ಹಾಗೂ ಕಾರ್ಯಾಧ್ಯಕ್ಷ ಬಿ.ಎಸ್. ಕಾರ್ಯಪ್ಪ ಖಂಡಿಸುವದಾಗಿ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯು ರಕ್ಷಣಾ ಪಡೆಗಳ ತವರೂರು ಇಷ್ಟು ಚಿಕ್ಕ ಜಿಲ್ಲೆಯಿಂದ ಅದೆಷ್ಟು ಸಾವಿರ ಜನರು ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಕ್ಷಣಾ ಮದ್ಯವನ್ನು ಪಡೆಯುವದು ಮತ್ತು ಉಪಯೋಗಿಸುವದು ರಕ್ಷಣಾ ಪಡೆಯಲ್ಲಿ ಸೇವೆ ಸಲ್ಲಿಸಿದ್ದ ಪ್ರತಿಯೊಬ್ಬನ ಹಕ್ಕಲ್ಲವೇ? ಅವರ ಹಕನ್ನು ಕಸಿಯುವದು ಸರಿಯಲ್ಲ. ಈ ಆದೇಶವನ್ನು ಇಲಾಖೆ ಹಿಂಪಡೆಯಲಿ ಎಂದು ಹಿತರಕ್ಷಣಾ ಸಮಿತಿಯ ಹೇಳಿಕೆಯಲ್ಲಿ ಕೋರಲಾಗಿದೆ.