ಮಡಿಕೇರಿ, ನ. 1: ತಾ.3ರಂದು ನ್ಯೂಯಾರ್ಕ್‍ನಲ್ಲಿ ನಡೆಯಲಿರುವ ವಿಶ್ವ ಮ್ಯಾರಥಾನ್‍ನಲ್ಲಿ ಪಾಲ್ಗೊಳ್ಳಲು ಆರ್. ಮಂಜುನಾಥ್ ಆಯ್ಕೆಯಾಗಿದ್ದಾರೆ.

ಮಡಿಕೇರಿ ಉದ್ಯಮಿ ಪಿ.ಜಿ. ಮಂಜುನಾಥ್ ಅವರ ಅಳಿಯ ಆರ್. ಮಂಜುನಾಥ್ ಅಂದು ನಡೆಯಲಿರುವ 42.195 ಕಿ.ಮೀ. ಓಟದಲ್ಲಿ ಪಾಲ್ಗೊಳ್ಳಲಿದ್ದಾರೆ. ನ್ಯೂಯಾರ್ಕ್‍ನಲ್ಲಿ 1970ರಲ್ಲಿ ಆರಂಭಗೊಂಡ ಮ್ಯಾರಥಾನ್‍ನಲ್ಲಿ ಭಾರತೀಯರು ವಿರಳವಾಗಿ ಆಯ್ಕೆಗೊಳ್ಳುತ್ತಿದ್ದಾರೆ. ಮಂಜುನಾಥ್ ಅಮೃತಶ್ರೀ ಅವರ ಪತಿಯಾಗಿದ್ದು, ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ.