ಮಡಿಕೇರಿ, ನ. ೨: ಕರ್ನಾಟಕ ರಾಜ್ಯ ಉಪವಲಯ ಅರಣ್ಯಾಧಿಕಾರಿಗಳ ಸಂಘದಿAದ ಈ ಹಿಂದೆ ಮುಂದಿರಿಸಲಾಗಿದ್ದ ವೇತನ ಶ್ರೇಣಿ ಪರಿಷ್ಕರಣೆ ಸೇರಿದಂತೆ ಬೇಡಿಕೆಗಳು ಆಶ್ವಾಸನೆಗಳ ಬಳಿಕವೂ ಈಡೇರದಿರುವದನ್ನು ವಿರೋಧಿಸಿ ತಾ. ೫ ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸಲು ತೀರ್ಮಾನಿಸಲಾಗಿದೆ.

ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಸಿಬ್ಬಂದಿಗಳು ಸಾಮೂಹಿಕ ರಜೆಯೊಂದಿಗೆ ಪ್ರತಿಭಟನೆ ನಡೆಸಲು ತೀರ್ಮಾನಿಸಿ ದ್ದಾರೆ. ಈ ಪ್ರತಿಭಟನೆಯಲ್ಲಿ ಕೊಡಗು ವೃತ್ತದ ಉಪ ಅರಣ್ಯಾಧಿಕಾರಿಗಳ ಸಂಘದ ಪದಾಧಿಕಾರಿಗಳೂ ಪಾಲ್ಗೊಳ್ಳಲಿದ್ದಾರೆ. ಈ ಬಗ್ಗೆ ಇಂದು ಕೊಡಗು ವೃತ್ತದ ಅಧ್ಯಕ್ಷ ಕೆ.ಎಂ. ದೇವಯ್ಯ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳಿಗೆ ಮನವಿ ಪತ್ರದೊಂದಿಗೆ ಮನವಿ ನೀಡಲಾಯಿತು.