ಮಡಿಕೇರಿ, ಅ. 31: ಪೊನ್ನಂಪೇಟೆಯ ಕಾವೇರಿ ಅಮ್ಮಕೊಡವ ಮಹಿಳಾ ಸಂಘದ ಮಹಾಸಭೆ ಅಖಿಲ ಅಮ್ಮಕೊಡವ ಸಮಾಜದ ಕಟ್ಟಡದಲ್ಲಿ ಅಧ್ಯಕ್ಷೆ ಅಮ್ಮತ್ತೀರ ರೇವತಿ ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ತಾಲೂಕು ಪಂಚಾಯಿತಿ ಸದಸ್ಯೆ ಉಮಾಪ್ರಭು, ಚಿಲ್ಲಚಮ್ಮನ ರೂಪ ಉಮೇಶ್ ಅತಿಥಿಗಳಾಗಿ ಆಗಮಿಸಿದ್ದರು. ಸಂಘದ ಸದಸ್ಯರು, ಅಮ್ಮಕೊಡವ ಜನಾಂಗದ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಕ್ಕಳಿಗೆ ಮತ್ತು ಮಹಿಳೆಯರಿಗೆ ಹಾಡು, ನೃತ್ಯ ಮತ್ತು ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.