ಕಟ್ಟಿ ಮಂದಯ್ಯ

ಶ್ರೀಮಂಗಲ, ಅ. 31: ಕೊಡಗು ಬೆಳೆಗಾರರ ಒಕ್ಕೂಟ ಕಳೆದ 16 ವರ್ಷಗಳಿಂದ ಜಿಲ್ಲೆಯ ಬೆಳೆಗಾರರ ಸಮಸ್ಯೆಯ ಬಗ್ಗೆ ಮತ್ತು ಬೆಳೆಗಾರರ ಹಿತ ಕಾಪಾಡುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸಿದೆ. ಬೆಳೆಗಾರರಿಗೆ ನ್ಯಾಯ ಒದಗಿಸುವ ಹಾಗೂ ಬೆಳೆಗಾರರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಒಕ್ಕೂಟವನ್ನು ಮತ್ತಷ್ಟು ಬಲಪಡಿಸಬೇಕಾಗಿದೆ ಎಂದು ಕೊಡಗು ಬೆಳೆಗಾರ ಒಕ್ಕೂಟದ ಕಾರ್ಯಾಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ಹೇಳಿದರು.

ಶ್ರೀಮಂಗಲ ಪ್ರವಾಸಿ ಮಂದಿರದಲ್ಲಿ ನಡೆದ ಒಕ್ಕೂಟದ ಪದಾಧಿಕಾರಿಗಳ ಸಭೆಯಲ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಕೊಡಗು ಬೆಳೆಗಾರರ ಒಕ್ಕೂಟದ ಜಿಲ್ಲಾ ಸಮಿತಿಯ ಸಭೆಯನ್ನು ನವೆಂಬರ್ 5 ರಂದು ಗೋಣಿಕೊಪ್ಪಲು ಸಿಲ್ವರ್ ಸ್ಕೈ ಹೊಟೇಲ್ ಸಭಾಂಗಣದಲ್ಲಿ ಪೂರ್ವಾಹ್ನ 10.30 ಗಂಟೆಗೆ ನಡೆಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಕೊಡಗು ಜಿಲ್ಲಾ ಬೆಳೆಗಾರರ ಒಕ್ಕೂಟದ ಮಾಣೀರ ವಿಜಯ ನಂಜಪ್ಪ, ಮಾಣೀರ ಕೆ. ಮುತ್ತಪ್ಪ, ಬಿ.ಪಿ. ದೇವಯ್ಯ, ಎ.ಎಸ್. ಕುಶಾಲಪ್ಪ, ಟಿ.ಬಿ. ಕಾರ್ಯಪ್ಪ, ಬಿ.ಎಸ್. ಪಾಪು, ಐ.ಎ. ದೇವಯ್ಯ, ಬೊಳ್ಳಜ್ಜಿರ ಅಶೋಕ್, ಅಜ್ಜಮಾಡ ನಂಜಪ್ಪ, ಕಾಳಿಮಾಡ ಎನ್. ಮುತ್ತಣ್ಣ, ಬಾದುಮಂಡ ಪೂಣಚ್ಚ ಮತ್ತಿತರರು ಹಾಜರಿದ್ದರು.