ಬೆಂಗಳೂರು, ಅ. 31: ಕಾಫಿ ಬೆಳೆಗಾರರಿಗೂ ಕೂಡಾ 10 ಹೆಚ್.ಪಿ. ಸಾಮಥ್ರ್ಯದ ಪಂಪ್ ಸೆಟ್‍ಗಳ ತನಕ ಉಚಿತ ವಿದ್ಯುತ್ ನೀಡಲು ಸರಕಾರ ತಾತ್ವಿಕ ಒಪ್ಪಿಗೆ ಸೂಚಿಸಿದೆ. ಗುರುವಾರ ಸಂಸದೆ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕರ್ನಾಟಕ ಬೆಳೆಗಾರರ ಒಕ್ಕೂಟದ ನಿಯೋಗ ಭೇಟಿ ಮಾಡಿ ಚರ್ಚಿಸಿತು. ಈ ಸಂದರ್ಭದಲ್ಲಿ ಕಾಫಿ ಬೆಳೆಗಾರರಿಗೆ ಕೂಡಾ ಉಚಿತ ವಿದ್ಯುತ್ ನೀಡುವಂತೆ ಮಾಡಿದ ಮನವಿಗೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದು, ಅಧಿಕೃತ ಆದೇಶ ಹೊರ ಬೀಳಬೇಕಿದೆ.
- ಬಿ.ಜಿ. ರವಿಕುಮಾರ್