ಗೋಣಿಕೊಪ್ಪ ವರದಿ, ಅ. 31: ಚಾಲಕ ವೃತ್ತಿ ಮಾಡುತ್ತಿದ್ದ ಕೈಕೇರಿ ನಿವಾಸಿ ಕೃಷ್ಣ (40) ಸೆಪ್ಟೆಂಬರ್ 17 ರಿಂದ ಕಾಣೆಯಾಗಿದ್ದು, ಈತನ ಎಲ್ಲಿಯೂ ಅವರ ಸುಳಿವು ಲಭಿಸಿಲ್ಲ ಎಂದು ನಾಪತ್ತೆಯಾಗಿರುವ ವ್ಯಕ್ತಿಯ ಪತ್ನಿ ಗೋಣಿಕೊಪ್ಪಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಳಿವು ಲಭಿಸಿದವರು 08274 247333 ಸಂಖ್ಯೆಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ಕೋರಿದೆ.