ಚೆಟ್ಟಳ್ಳಿ, ಅ. 30: ಸೋಮವಾರಪೇಟೆ ತಾಲೂಕಿನ ಹೊಸತೋಟದ ಸ್ಪೂರ್ತಿ ಕ್ಲಬ್ ವತಿಯಿಂದ ನ. 3 ರಂದು ಹೊಸತೋಟದ ಒಳಾಂಗಣ ಕ್ರೀಡಾಂಗಣದಲ್ಲಿ ಪುರುಷರ ಡಬಲ್ಸ್ ಮುಕ್ತ ಶಟಲ್ ಪಂದ್ಯಾಟವನ್ನು ಆಯೋಜನೆ ಮಾಡಲಾಗಿದೆÉಂದು ಕ್ಲಬ್‍ನ ಅಧ್ಯಕ್ಷ ಗೌತಮ್ ಶಿವಪ್ಪ ತಿಳಿಸಿದ್ದಾರೆ.

ಪ್ರಥಮ ಬಹುಮಾನ ಟ್ರೋಫಿ ಹಾಗೂ ರೂ. 12 ಸಾವಿರ ನಗದು, ದ್ವಿತೀಯ ಬಹುಮಾನ ಟ್ರೋಫಿ ಹಾಗೂ ರೂ. 7 ಸಾವಿರ ಹಾಗೂ ತೃತೀಯ ಬಹುಮಾನ ಟ್ರೋಫಿ ಹಾಗೂ ರೂ. 2 ಸಾವಿರ ನಗದು ನೀಡಲಾಗುವದೆಂದು ಗೌತಮ್ ಶಿವಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 7760929195 ಸಂಪರ್ಕಿಸಬಹುದು.