ಗೋಣಿಕೊಪ್ಪ ವರದಿ, ಅ. 30: ಹರಿಶ್ಚಂದ್ರಪುರ ಮುಖ್ಯರಸ್ತೆಯಲ್ಲಿ ನಡೆದ ಬೈಕ್‍ಗಳ ಮುಖಾಮುಖಿ ಡಿಕ್ಕಿಯಿಂದ ಒಬ್ಬ ಸವಾರ ಗಂಭೀರ ಗಾಯಗೊಂಡಿದ್ದು, ಮತ್ತೊಂದು ಬೈಕ್‍ನಲ್ಲಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ. ಗಂಭೀರ ಗಾಯಗೊಂಡಿರುವ ಹರಿಶ್ಚಂದ್ರಪುರ ನಿವಾಸಿ ರಾಜು (30) ಎಂಬವರನ್ನು ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದ ಇಬ್ಬರು ಸವಾರರಾದ ಆದರ್ಶ್ (22), ದೀಕ್ಷಿತ್ (23) ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಪಾನಿಪೂರಿ ವ್ಯಾಪಾರ ನಡೆಸುತ್ತಿದ್ದ ರಾಜು ಪಟ್ಟಣದಿಂದ ಮನೆಯತ್ತ ತೆರಳುತ್ತಿದ್ದಾಗ ಘಟನೆ ನಡೆದಿದ್ದು, ರಾಜು ಮನೆಗೆ ಬೈಕ್ ತಿರುಗಿಸುವಾಗ ತಿತಿಮತಿ ಕಡೆಯಿಂದ ಬಂದ ಆದರ್ಶ್ ಮತ್ತು ದೀಕ್ಷಿತ್ ಅವರುಗಳು ಬರುತ್ತಿದ್ದ ಬೈಕ್ ಡಿಕ್ಕಿಯಾಗಿ ಎರಡು ಬೈಕ್ ಹಾಗೂ ಸವಾರರು ದೂರಕ್ಕೆ ಎಸೆಯಲ್ಪಟ್ಟಿದ್ದರು. ಪರಿಣಾಮ ರಾಜು ಅವರ ತಲೆ, ಬೆನ್ನುಮೂಳೆಗೆ ಬಲವಾದ ಪೆಟ್ಟು ಬಿದ್ದು, ಕಾಲು ಮುರಿದಿದೆ. ನಂತರ ಇವರನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಲಾಯಿತು. ಆದರ್ಶ್ ಮತ್ತು ದೀಕ್ಷಿತ್ ಪ್ರಯಾಣಿಸುತ್ತಿದ್ದ ಬೈಕ್ ಅತೀ ವೇಗದಿಂದ ಬಂದಿರುವದೇ ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

-ಸುದ್ದಿಮನೆ