ನಾಪೆÇೀಕ್ಲು, ಅ. 30: ಸಂಚಾರಿ ಕಾನೂನು ಉಲ್ಲಂಘನೆ ಮತ್ತು ಸಮಾಜಘಾತುಕ ಕೃತ್ಯ ಎಸಗುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವದು ಎಂದು ಡಿವೈಎಸ್‍ಪಿ ದಿನೇಶ್‍ಕುಮಾರ್ ಎಚ್ಚರಿಸಿದರು.

ನಾಪೆÇೀಕ್ಲು ಶ್ರೀ ರಾಮ ಟ್ರಸ್ಟ್ ವಿದ್ಯಾ ಸಂಸ್ಥೆಯ ಸಭಾಂಗಣದಲ್ಲಿ ಕರೆಯಲಾಗಿದ್ದ ನಾಪೆÇೀಕ್ಲು ಪೆÇಲೀಸ್ ಠಾಣಾ ವ್ಯಾಪ್ತಿಯ ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು.

ವಾಹನ ದಾಖಲಾತಿ ಇಲ್ಲದೆ ವಾಹನ ಚಲಾಯಿಸುವವರಿಗೆ ಹೆಚ್ಚಿನ ಮೊತ್ತದ ದಂಡ ವಿಧಿಸುವ ಬಗ್ಗೆ ಈಗಾಗಲೇ ತಿಳಿದಿದೆ. ಎಲ್ಲರು ಸೂಕ್ತ ದಾಖಲಾತಿಗಳನ್ನು ವಾಹನದಲ್ಲಿ ಇಟ್ಟುಕೊಳ್ಳುವ ಮೂಲಕ ದಂಡ ಕಟ್ಟುವದನ್ನು ತಪ್ಪಿಸಿಕೊಳಬೇಕು. ಮದ್ಯಪಾನ ಮಾಡಿ ವಾಹನ ಓಡಿಸಲು ಅವಕಾಶವಿಲ್ಲ ಎಂದರು. ಆಟೋ ರಿಕ್ಷಾ ಚಾಲಕರು ಶಿಸ್ತು ಬದ್ಧವಾಗಿ ತಮ್ಮ ಕೆಲಸ ನಿರ್ವಹಿಸಬೇಕು.

ಪ್ರಯಾಣಿಕ ರೊಂದಿಗೆ ಸೌಹಾರ್ದಯುತವಾಗಿ ವರ್ತಿಸಬೇಕು ಅಶಾಂತಿಗೆ ಅವಕಾಶ ನೀಡಬಾರದು ಎಂದು ಸಲಹೆ ನೀಡಿದರು.

ಎಲ್ಲರೂ ಅನ್ಯೋನ್ಯತೆಯಿಂದ, ನೆಮ್ಮದಿಯಿಂದ ಸಮಾಜದಲ್ಲಿ ಬದುಕಬೇಕಾದರೆ, ಬಡವ, ಶ್ರೀಮಂತ, ಜಾತಿ, ಧರ್ಮಗಳ ನಡುವೆ ಭೇದ ಕಲ್ಪಿಸಬಾರದು. ಎಲ್ಲರೂ ನಮ್ಮಂತೆ ಎಂದು ತಿಳಿದರೆ ಯಾವದೇ ಸಂಘರ್ಷಕ್ಕೆ ಅವಕಾಶವಿರುವದಿಲ್ಲ ಎಂದು ತಿಳಿಸಿದರು.

ವೇದಿಕೆಯಲ್ಲಿ ಮಡಿಕೇರಿ ಗ್ರಾಮಾಂತರ ಠಾಣಾ ಪೆÇಲೀಸ್ ವೃತ್ತ ನಿರೀಕ್ಷಕ ದಿವಾಕರ್, ನಾಪೆÇೀಕ್ಲು ಪೆÇಲೀಸ್ ಠಾಣಾಧಿಕಾರಿ ಆರ್. ಮಂಚಯ್ಯ, ನಾಪೆÇೀಕ್ಲು ಬಿಜೆಪಿ ಹೋಬಳಿ ಘಟಕದ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಎಮ್ಮೆಮಾಡುವಿನ ಅಬೂಬಕರ್, ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸದಸ್ಯ ಸಿ.ಎ. ಮಹಮ್ಮದ್ ಮತ್ತಿತರರಿದ್ದರು. ಸಿಬ್ಬಂದಿ ಸಮ್ಮದ್ ಸ್ವಾಗತಿಸಿ, ವಂದಿಸಿದರು.