ಕರಿಕೆ, ಅ. 29: ಇಲ್ಲಿಗೆ ಸಮೀಪದ ಚೆತ್ತುಕಾಯ ಕುಂಡತಿಕಾನ ಗಿರಿಜನ ಕಾಲೋನಿಗೆ ಸಂಪರ್ಕ ರಸ್ತೆಗೆ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಯಡಿಯಲ್ಲಿ ಮೂವತ್ತು ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಕಾಂಕ್ರಿಟ್ ರಸ್ತೆಯನ್ನು ಜಿ.ಪಂ.ಸದಸ್ಯೆ ಕವಿತಾ ಪ್ರಭಾಕರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಾಜಪ ಗ್ರಾಮ ಸಮಿತಿ ಅದ್ಯಕ್ಷ ಹೊಸಮನೆ ಹರೀಶ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ರಾಜೇಂದ್ರ ಕೆ.ಬಿ.ಹಾಗೂ ಇತರ ಪ್ರಮುಖರು ಗ್ರಾಮಸ್ಥರು ಹಾಜರಿದ್ದರು.