ಶ್ರೀಮಂಗಲ, ಅ. 28: ಸೆಸ್ಕ್ ಇಲಾಖೆಯಿಂದ ಜಿಲ್ಲೆಯಲ್ಲಿ ವಿದ್ಯುತ್ ಬಿಲ್ ಬಾಕಿದಾರ ರೈತರ ಮನೆಯ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡಲಾಗುತ್ತಿದ್ದು, ಇದನ್ನು ತಕ್ಷಣದಿಂದ ನಿಲ್ಲಿಸಿ, ಕಡಿತ ಮಾಡಿರುವ ಸಂಪರ್ಕವನ್ನು ಮರುಸಂಪರ್ಕ ಮಾಡುವಂತೆ ರೈತ ಸಂಘದ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್ ಒತ್ತಾಯಿಸಿದ್ದಾರೆ. ಈ ಬಗ್ಗೆ ಪತ್ರಿಕೆ ಹೇಳಿಕೆ ನೀಡಿರುವ ಅವರು, ತಾ. 30 ರಂದು ಗೋಣಿಕೊಪ್ಪ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು ಎಂದು ಹೇಳಿದ್ದಾರೆ.