ಶನಿವಾರಸಂತೆ, ಅ. 28: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕ, ನಿಲುವಾಗಿಲು-ಬೆಸೂರು ಗ್ರಾಮದ ಶ್ರೀಬಾಲ ತ್ರಿಪುರ ಸುಂದರಿ ಅಮ್ಮ ದೇವಾಲಯ ಸಮಿತಿ ಸಹಭಾಗಿತ್ವದಲ್ಲಿ ಶರಣ ಸಂಗಮ ಸಂಸ್ಕøತಿ ದರ್ಶನ ಜಿಲ್ಲಾಮಟ್ಟದ ವಿಚಾರಗೋಷ್ಠಿ ನ. 3 ರಂದು ಬೆಳಿಗ್ಗೆ 10.30 ರಿಂದ ದೇವಾಲಯ ಆವರಣದಲ್ಲಿ ನಡೆಯಲಿದೆ ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಮಹೇಶ್ ತಿಳಿಸಿದರು.
ಸಮೀಪದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವಸ್ವಾಮಿ ವಿದ್ಯಾಸಂಸ್ಥೆ ಕಚೇರಿಯಲ್ಲಿ ಶರಣ ಸಂಗಮ ಸಂಸ್ಕøತಿ ದರ್ಶನ ಜಿಲ್ಲಾಮಟ್ಟದ ವಿಚಾರಗೋಷ್ಠಿ ಕುರಿತು ಮಠಾಧೀಶ ಸದಾಶಿವ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು,
ಅಂದು 3 ವಿಚಾರಗೋಷ್ಠಿಗಳು ನಡೆಯಲಿದ್ದು, ಬೆಳಿಗ್ಗೆ 10.30 ಕ್ಕೆ ಮೊದಲ ಗೋಷ್ಠಿ ಹಾಗೂ ಕಾರ್ಯಕ್ರಮವನ್ನು ಹಿರಿಯ ಸಾಹಿತಿ ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರ ಗೊ.ರು. ಚೆನ್ನಬಸಪ್ಪ ಉದ್ಘಾಟಿಸುವರು. ಕಲ್ಲುಮಠದ ಮಹಾಂತ ಸ್ವಾಮೀಜಿ ಹಾಗೂ ತಪೋವನ ಕ್ಷೇತ್ರ ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಅಪ್ಪಾರಾವ್ ಅಕ್ಕೋಣಿ ಅಧ್ಯಕ್ಷತೆ ವಹಿಸುವದು. ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಮಹೇಶ್ ಆಶ್ರಯ ನುಡಿಯಾಡುವರು. ಮುಖ್ಯ ಅತಿಥಿಗಳಾಗಿ ಹಿರಿಯ ವಕೀಲ ಚಂದ್ರಮೌಳಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ವೀರಶೈವ ಮಹಾಸಭಾ ಜಿಲ್ಲಾ ಅಧ್ಯಕ್ಷ ಹೆಚ್.ವಿ. ಶಿವಪ್ಪ, ರಾಜ್ಯ ಕಾರ್ಯದರ್ಶಿ ರಾಜೇಶ್ವರಿ ನಾಗರಾಜ್, ದೇವಾಲಯ ಸಮಿತಿ ಅಧ್ಯಕ್ಷ ಪ್ರಸನ್ನ, ಇತರ ಪ್ರಮುಖರು ಪಾಲ್ಗೊಳ್ಳುವರು ಎಂದು ಮಾಹಿತಿ ನೀಡಿದರು.
ಮಧ್ಯಾಹ್ನ 12 ಗಂಟೆಗೆ ನಡೆವ 2ನೇ ವಿಚಾರಗೋಷ್ಠಿಯಲ್ಲಿ ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸುವರು. ಕೊಡಗು ವಿದ್ಯಾ ಇಲಾಖೆ ನೌಕರರ ಪತ್ತಿನ ಸೌಹಾರ್ದ ಸಂಘದ ಅಧ್ಯಕ್ಷ ಡಿ.ಬಿ. ಸೋಮಪ್ಪ ಅಧ್ಯಕ್ಷತೆ ವಹಿಸುವರು. ಸಂಪನ್ಮೂಲ ವ್ಯಕ್ತಿಗಳಾದ ಸಿ.ಎಂ. ಧರ್ಮಪ್ಪ ಹಾಗೂ ಕೆ.ಪಿ. ಜಯಕುಮಾರ್ ವಿಚಾರ ಮಂಡಿಸುವದು.
ಸಂಜೆ 4 ಗಂಟೆಗೆ 3ನೇ ವಿಚಾರಗೋಷ್ಠಿ, ಸನ್ಮಾನ ಹಾಗೂ ಸಮಾರೋಪ ನಡೆಯಲಿದ್ದು, ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಸಾನಿಧ್ಯ ವಹಿಸುವರು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವಿಶೇಷ ಆಹ್ವಾನಿತರಾಗಿದ್ದು, ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಎಸ್. ಮಹೇಶ್ ಅಧ್ಯಕ್ಷತೆ ವಹಿಸುವರು. ಸಾಹಿತಿ ಮೋಹನ್ ಪಾಳೇಗಾರ್ ಸಮಾರೋಪ ನುಡಿಯಾಡುವರು. ಮುಖ್ಯ ಅತಿಥಿಗಳಾಗಿ ಪ್ರಮುಖರಾದ ಪುಟ್ಟರಾಜ್, ವೈ. ಪ್ರಕಾಶ್, ವಸಂತಕುಮಾರ್, ರಾಜಶೇಖರ್, ಬಿ.ಕೆ. ಹಾಲಪ್ಪ, ಕೆ.ಎನ್. ಸಂದೀಪ್, ಎಸ್.ಎಸ್. ಸುರೇಶ್, ಎನ್.ಯು. ಈರಪ್ಪ, ಬಿ.ಕೆ. ಯತೀಶ್, ಶ.ಗ. ನಯನತಾರಾ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳುತ್ತಾರೆ ಎಂದು ಮಹೇಶ್ ವಿವರಿಸಿದರು. ಗೋಷ್ಠಿಯಲ್ಲಿ ಪ್ರಮುಖರಾದ ಮಹಾದೇವಪ್ಪ, ಹೆಚ್.ಎಸ್. ಪ್ರೇಮನಾಥ್, ರೇಣುಕಪ್ಪ, ಡಿ.ಬಿ. ಸೋಮಪ್ಪ, ಪ್ರಸನ್ನ ಹಾಗೂ ದೇವಾಲಯ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.