ಸೋಮವಾರಪೇಟೆ, ಅ. 28: ಕರ್ನಾಟಕ ಗ್ರಾಮೀಣ ಬ್ಯಾಂಕಿನ ಗ್ರಾಹಕ ಸಂಪರ್ಕ ಸಭೆಯನ್ನು ಪ್ರಾದೇಶಿಕ ವ್ಯವಸ್ಥಾಪಕ ದಾಮೋಧರ್ ಭಟ್ ಅವರ ಸಮ್ಮುಖದಲ್ಲಿ ತೋಳೂರುಶೆಟ್ಟಳ್ಳಿ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಆವರಣದಲ್ಲಿ ನಡೆಸಲಾಯಿತು.

ಗ್ರಾಹಕರ ಸಲಹೆ, ಬ್ಯಾಂಕಿನ ನೂತನ ನಿಯಮಗಳ ಬಗ್ಗೆ ವಿವರಣೆ ನೀಡಲಾಯಿತು. ತೋಳೂರುಶೆಟ್ಟಳ್ಳಿ ಶಾಖೆಯ ವ್ಯವಸ್ಥಾಪಕ ರಘುಚಂದ್ರ ಹಾಗೂ ಸಿಬ್ಬಂದಿ ವರ್ಗದವರು, ಗ್ರಾಹಕರು ಉಪಸ್ಥಿತರಿದ್ದರು.