ಮಡಿಕೇರಿ, ಅ. 28: ವಿಜಯ ವಿನಾಯಕ ಗೌಡ ಒಕ್ಕೂಟದ ಆಶ್ರಯದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ 8ನೇ ವಾರ್ಷಿಕ ಸಭೆ ಹಾಗೂ ಸಂತೋಷ ಕೂಟವನ್ನು ಮಡಿಕೇರಿಯ ಕೊಡಗು ಗೌಡ ವಿದ್ಯಾಸಂಘದ ಸಭಾಂಗಣದಲ್ಲಿ ನಡೆಸಲಾಯಿತು.
ಒಕ್ಕೂಟದ ಅಧ್ಯಕ್ಷ ಕುರಿಕಡ ಆನಂದ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಮಡಿಕೇರಿಯ ಡಿವೈಎಸ್ಪಿ ಬಾರಿಕೆ ದಿನೇಶ್ ಕುಮಾರ್ ಪೂಣಚ್ಚ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ದೀಪಾವಳಿಯಂದೇ ಜನಾಂಗ ಬಾಂಧವರೆಲ್ಲಾ ಒಗ್ಗೂಡಿ ಈ ರೀತಿಯ ಕಾರ್ಯಕ್ರಮ ಆಯೋಜಿಸುತ್ತಿರುವದು ಸಂತಸದ ವಿಚಾರ. 25 ವರ್ಷಗಳಿಂದ ಪೆÇಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಇದೀಗ ತಾಯ್ನಾಡಿನಲ್ಲಿ ಕೆಲಸ ಮಾಡುತ್ತಿರುವದು ಹೆಮ್ಮೆಯೆನಿಸುತ್ತದೆ. ಕೊಡಗಿನಲ್ಲಿರುವ ಪ್ರತಿಯೊಂದು ಜನಾಂಗಕ್ಕೂ ಪ್ರಾಶಸ್ತ್ಯ ನೀಡಿ ಸಂವಿಧಾನಬದ್ಧವಾಗಿ, ಕಾನೂನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದರು.
ಇಂದು ಸಮಾಜದಲ್ಲಿ ಪೆÇಲೀಸರು ಮತ್ತು ಲಂಚ ಒಂದೇ ನಾಣ್ಯದ 2 ಮುಖಗಳು ಎನ್ನುವ ಆರೋಪಗಳು ಕೇಳಿ ಬರುತ್ತಿದ್ದು; ಇಂತಹ ಭಾವನೆಗಳು ಬದಲಾಗಬೇಕು. ಪೆÇಲೀಸ್ ಕೆಲಸ ಗೌರವಯುತವಾದ ಕೆಲಸವಾಗಿದ್ದು ಅಪರಾಧ ರಹಿತ ಸಮಾಜ ನಿರ್ಮಾಣ ಪೆÇಲೀಸರ ಗುರಿಯಾಗಿದೆ ಎಂದರಲ್ಲದೆ; ಈ ರೀತಿಯ ಜನಾಂಗ ಒಕ್ಕೂಟಗಳು ಸಮಾಜದ ಅಭಿವೃದ್ಧಿಯತ್ತ ಚಿತ್ತ ಹರಿಸಬೇಕು. ಸಮಾಜದಲ್ಲಿರುವ ಸಮಸ್ಯೆಗಳನ್ನು ಪ್ರಶ್ನೆ ಮಾಡಬೇಕು ಎಂದು ಕರೆ ನೀಡಿ, ಜನಾಂಗ ಬಾಂಧವರು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಂಡು ಮುಂಬರಬೇಕು ಎಂದು ಸಲಹೆ ನೀಡಿದರು.
ಪ್ರಮುಖರಾದ ಕೋಡಿ ಗುರುರಾಜ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಮುಕ್ಕಾಟಿ ವಾಸುದೇವ್, ಒಕ್ಕೂಟದ ಅಧ್ಯಕ್ಷರಾದ ಕುರಿಕಡ ಆನಂದ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯೆ ಚೊಕ್ಕಾಡಿ ಪ್ರೇಮಾ ರಾಘವಯ್ಯ, ನಿವೃತ್ತ ಶಿಕ್ಷಕ ಕಟ್ರತನ ಬೆಳ್ಯಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಜಯ ವಿನಾಯಕ ಗೌಡ ಒಕ್ಕೂಟದ ಪದಾಧಿಕಾರಿಗಳು ಸೇರಿದಂತೆ ಕಾರ್ಯದರ್ಶಿ ಕಾನೆಹಿತ್ಲು ಮೊಣ್ಣಪ್ಪ, ಪ್ರಮುಖರಾದ ಸೂರ್ತಲೆ ಸೋಮಣ್ಣ ಉಪಸ್ಥಿತರಿದ್ದರು.