ಮಡಿಕೇರಿ, ಅ. 28: ರೋಟರಿ ಕ್ಲಬ್, ಉಡುಪಿ, ಮಣಿಪಾಲ್ ಸಂಸ್ಥೆ ಅಪಘಾತದಲ್ಲಿ ಕೈ-ಕಾಲು ಕಳೆದುಕೊಂಡಿರುವ ವಿಶೇಷಚೇತನರಿಗೆ ಉಚಿತವಾಗಿ ಕೃತಕ ಕೈಗಳನ್ನು ಹಾಗೂ ಫ್ರೀಡಂ ಟ್ರಸ್ಟ್ ಚೆನೈ ಸಂಸ್ಥೆ ಇವರಿಂದ ಉಚಿತವಾಗಿ ಕೃತಕ ಕಾಲು ಜೋಡಿಸುವ ಶಿಬಿರವನ್ನು ಏರ್ಪಡಿಸಿದೆ. ಈ ಎರಡು ಸಂಸ್ಥೆಗಳು ಪ್ರತ್ಯೇಕವಾಗಿ ಪ್ರತ್ಯೇಕ ದಿನಾಂಕ ಹಾಗೂ ಸ್ಥಳಗಳಲ್ಲಿ ಹಮ್ಮಿಕೊಂಡಿದ್ದು, ಕೈ ಹಾಗೂ ಕಾಲುಗಳ ಜೋಡಣೆಯ ಪ್ರಯೋಜನವನ್ನು ಪಡೆದುಕೊಳ್ಳಲು ಇಚ್ಚಿಸುವ ವಿಶೇಷಚೇತನರು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಥವಾ ದೂ. 08272-222830ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು.