ಶನಿವಾರಸಂತೆ, ಅ. 28: ಶನಿವಾರಸಂತೆಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್ ವಹಿಸಿದ್ದರು.

ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಕೆ. ಇಂಧೂದರ ಸಭೆಯನ್ನುದ್ದೇಶಿಸಿ ಮಾತನಾಡಿ, ಆಸ್ಪತ್ರೆಯ ಆವರಣದಲ್ಲಿರುವ ಶವಗಾರ ತುಂಬಾ ಶಿಥಿಲಗೊಂಡಿದ್ದು, ಶವಗಾರವನ್ನು ದುರಸ್ತಿಪಡಿಸಲು ಕ್ರಮ ವಹಿಸಬೇಕೆಂದು ಸಲಹೆ ನೀಡಿದರು.

ದುಂಡಳ್ಳಿ ಗ್ರಾ.ಪಂ. ಅಧ್ಯಕ್ಷ ರಕ್ಷಾ ಸಮಿತಿ ಸದಸ್ಯ ಸಿ.ಜೆ. ಗಿರೀಶ್, ಗ್ರಾ.ಪಂ. ಅಧ್ಯಕ್ಷ ಮಹಮದ್ ಗೌಸ್, ರಕ್ಷಾ ಸಮಿತಿ ಸದಸ್ಯರುಗಳಾದ ಸೈಯದ್ ಸಲೀಂ, ಶುಕ್ಲಂಭರಂ, ನರೇಶ್‍ಚಂದ್ರ, ಸರಕಾರಿ ಆರೋಗ್ಯ ಕೇಂದ್ರದ ಕಚೇರಿ ಅಧೀಕ್ಷಕ ಎಂ.ಎಸ್. ಗಿರೀಶ್, ಆಸ್ಪತ್ರೆಯ ಪ್ರಥಮ ದರ್ಜೆ ಸಹಾಯಕ ಕೆ.ಆರ್. ನವೀನ್‍ಕುಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಕೆ.ಆರ್. ನವೀನ್‍ಕುಮಾರ್ ಸ್ವಾಗತಿಸಿ, ಎಂ.ಎಸ್. ಗಿರೀಶ್ ವಂದಿಸಿದರು.