ವೀರಾಜಪೇಟೆ, ಅ.26: ಶುಭಪ್ರದಾಯಕ ದೀಪಗಳ ಹಬ್ಬ ದೀಪಾವಳಿ ಪ್ರಯುಕ್ತ ಹಿಂದೂಪರ ಸಂಘಟನೆಗಳಿಂದ ನಗರದಲ್ಲಿ ದೀಪಲಕ್ಷ್ಮೀ ಪೂಜೆಯನ್ನು ಆಯೋಜಿಸಲಾಗಿದೆ.
ವಿಶ್ವ ಹಿಂದೂ ಪರಿಷತ್ ಮತ್ತು ದುರ್ಗಾವಾಹಿನಿ ವೀರಾಜಪೇಟೆ ತಾಲೂಕು ವತಿಯಿಂದ ನಗರದ ಮಹಿಳಾ ಸಮಾಜದಲ್ಲಿ ದೀಪಲಕ್ಷ್ಮೀ ಪೂಜೆಯನ್ನು ತಾ.28ರಂದು ಆಯೋಜಿಸಲಾಗಿದೆ. ಬೆಳಗಿನಿಂದ ವಿಶೇಷ ಕಾರ್ಯಕ್ರಮಗಳು ಜರುಗಲಿದೆ. 12 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ಹಿಂದೂ ಪರಿಷತ್ ವೀರಾಜಪೇಟೆ ಅಧ್ಯಕ್ಷ ಸಣ್ಣುವಂಡ ಗಣೇಶ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಿ. ನರಸಿಂಹ, ವಿದ್ಯಾ ಮಲ್ಯ ಆಗಮಿಸಲಿದ್ದಾರೆ ಎಂದು ಸಂಘಟನೆಯ ಪ್ರಮುಖರು ತಿಳಿಸಿದ್ದಾರೆ.