ಮಡಿಕೇರಿ, ಅ. 26: ಸ್ವಾಯತ್ತ ಕೊಡವ ಲ್ಯಾಂಡ್ ಮತ್ತು ದೇವಟ್‍ಪರಂಬು ಹತ್ಯಾಕಾಂಡ ವಿಚಾರಕ್ಕೆ ಸಂಬಂಧಿಸಿದಂತೆ ಫ್ರೆಂಚ್ ಸರಕಾರ ಕೊಡವರ ಕ್ಷಮೆಯಾಚನೆ ಮಾಡಬೇಕೆಂದು ಒತ್ತಾಯಿಸಿ ನ. 1ರಂದು ಸಿ.ಎನ್.ಸಿ. ವತಿಯಿಂದ ದೆಹಲಿಯಲ್ಲಿ ಹಮ್ಮಿಕೊಂಡಿರುವ ದೆಹಲಿ ಚಲೋ ಸತ್ಯಾಗ್ರಹದ ಅಂಗವಾಗಿ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯುತ ಧರಣಿ ನಡೆಸಲಾಯಿತು. ಜಿಲ್ಲಾಧಿಕಾರಿಗಳ ಮೂಲಕ ಭಾರತ ಸರಕಾರಕ್ಕೆ ಜ್ಞಾಪನಾ ಪತ್ರ ರವಾನಿಸಲಾಯಿತು.
ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ, ಚಂಬಂಡ ಜನತ್, ಬೊಟ್ಟಂಗಡ ಗಿರೀಶ್, ಅರೆಯಾಡ ಗಿರೀಶ್, ನಂದಿನೆರವಂಡ ವಿಜು, ಅರೆಯಡ ಗಿರೀಶ್, ಮಂಡಪಂಡ ಮನೋಜ್, ಪುಟ್ಟಿಚಂಡ ಡಾನ್ ದೇವಯ್ಯ, ಇಳಪಂಡ ಮಿಟ್ಟು, ಬಾಚಮಂಡ ಬೆಳ್ಳು, ಕೊಂಗೇಟಿರ ಲೋಕೇಶ್, ಚಂಗಂಡ ಚಾಮಿ, ಅಲಮಂಡ ನೆಹರು, ಕುಪದಿರಾ ಸಾಬು, ಪಟ್ಟಮಾಡ ಕುಶಾ, ಪೊರಿಮಂಡ ದಿನಮಣಿ, ಪುಲ್ಲೇರ ಕಾಳಪ್ಪ, ಕಾಟುಮಣಿಯಂಡ ಉಮೇಶ್ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.