ಸಿದ್ದಾಪುರ, ಅ. 25: ಸಿದ್ದಾಪುರ “ಟೀಕ್ ವುಡ್” ತೋಟದ ಮಾಲೀಕ ಕಂಬೀರಂಡ ನಂಜಪ್ಪ(87) ಅವರು ಗುರುವಾರ ನಿಧನರಾದರು. ಮೃತರು ಪತ್ನಿ ಬೃಂದಾ ನಂಜಪ್ಪ್ಪ ಹಾಗೂ ಐವರು ಪುತ್ರಿಯರನ್ನು ಅಗಲಿದ್ದಾರೆ.ನಂಜಪ್ಪ ಅವರು ತಮ್ಮ ತೋಟದ ಮನೆ ಬಳಿಯೇ ಸಾರ್ವಜನಿಕ ಶ್ರೀ ಚಾಮುಂಡೇಶ್ವರಿ ದೇವಾಲಯವನ್ನು ಸ್ಥಾಪಿಸಿ ಪ್ರತಿ ವರ್ಷ ಸಾರ್ವಜನಿಕರೂ ಭಾಗವಹಿಸುವಂತಹ ಉತ್ಸವವನ್ನು ನಡೆಸುತ್ತಿದ್ದರು. ಕÀಂಬೀರಂಡ ನಂಜಪ್ಪ ಇನ್ನಿಲ್ಲ(ಮೊದಲ ಪುಟದಿಂದ) ಶ್ರೀ ಚಾಮುಂಡೇಶ್ವರಿ ಟ್ರಸ್ಟ್ ರಚಿಸಿ ಆ ಮೂಲಕ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ, ಧಾರ್ಮಿಕ ಹಾಗೂ ಸಾಮಾಜಿಕ ಕಾಂiÀರ್iಕ್ರಮಗಳಿಗೆ ಆರ್ಥಿಕ ನೆರವು ನೀಡುತ್ತಿದ್ದರು. ಅಲ್ಲದೆ, ದೇವಾಲಯ ಬಳಿಯೇ ಸಭಾಭವನವೊಂದನ್ನು ನಿರ್ಮಿಸಿದ್ದು ವಿವಾಹ, ನಾಮಕರಣ ಹಾಗೂ ಧಾರ್ಮಿಕ ಸಭೆಗಳಿಗೆÉ ಉಚಿತವಾಗಿ ನೀಡುತ್ತಿದ್ದರು, ಈ ಹಿಂದೆ ವಿಶ್ವ ಹಿಂದೂ ಪರಷತ್‍ನ ಜಿಲ್ಲಾಧ್ಯಕ್ಷರಾಗಿ, ತಲಕಾವೇರಿ -ಭಾಗಮಂಡಲ ದೇವಾಲಯ ಪುನರ್ ಪ್ರತಿಷ್ಠಾಪನಾ ಸಮಿತಿ ಪದಾಧಿಕಾರಿಯಾಗಿ ಹಾಗೂ ಮತ್ತಿತರ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರÀು. ಮೃತರ ಅಂತ್ಯಕ್ರಿಯೆಯು ಅವರ ತೋಟದ ಆವರಣದಲ್ಲಿ ಶುಕ್ರವಾರ ನಡೆಯಿತು.