ಚೆಟ್ಟಳ್ಳಿ, ಅ. 25: ಗುಹ್ಯ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಚೇಂಬರ್ಸ್ ಆಫ್ ಕಾಮರ್ಸ್ ಮಹಾಸಭೆಯಲ್ಲಿ ಸಿದ್ದಾಪುರದ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾಗಿ ಕೆ.ಕೆ. ಶ್ರೀನಿವಾಸ್ ಹಾಗೂ ಉಪಾಧ್ಯಕ್ಷರಾಗಿ ರಹೂಫ್ ಹಾಜಿ, ಪ್ರಧಾನ ಕಾರ್ಯದರ್ಶಿಯಾಗಿ ರೋಹಿತ್, ಕಾರ್ಯದರ್ಶಿಯಾಗಿ ರಿಜ್ವಾದ್, ಖಜಾಂಚಿಯಾಗಿ ಸಮೀರ್ ಹಾಗೂ ಸಮಿತಿಯ ನಿರ್ದೇಶಕರುಗಳಾಗಿ ಜೋಸೆಫ್ ಶ್ಯಾಮ್, ಶ್ರೀಕಾಂತ್ ರಾವ್, ಬಿಜು, ಅಲ್ತಾಫ್, ದಿನೇಶ್, ಶರತ್, ಬಾಬುಲಾಲ್, ವಾಸು, ಮುತ್ತು, ವೆಂಕಟೇಶ್ ಸೇರಿದಂತೆ ಮತ್ತಿತರರನ್ನು ಆಯ್ಕೆ ಮಾಡಲಾಯಿತು. ಚೇಂಬರ್ ಆಫ್ ಕಾಮರ್ಸ್ ಜಿಲ್ಲಾಧ್ಯಕ್ಷ ಬಿ.ಎನ್. ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಟ್ರಸ್ಟ್‍ನ ಅಧ್ಯಕ್ಷ ಕೆ.ಬಿ. ಗಿರೀಶ್ ಗಣಪತಿ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಎಂ.ಪಿ. ಕೇಶವ ಕಾಮತ್, ಚೆಂಬರ್ ಆಫ್ ಕಾಮರ್ಸ್ ಮಾಜಿ ಅಧ್ಯಕ್ಷ ರಾಜ್ ಕುಮಾರ್, ಸಿದ್ದಾಪುರ ಗ್ರಾ.ಪಂ. ಅಧ್ಯಕ್ಷ ಎಂ.ಕೆ. ಮಣಿ ಹಾಗೂ ಸಿದ್ದಾಪುರದ ವರ್ತಕರು ಉಪಸ್ಥಿತರಿದ್ದರು.