ಮಡಿಕೇರಿ, ಅ. 25: ಗಾಂಧಿ ವಿಚಾರಧಾರೆಗಳನ್ನು ಜಿಲ್ಲೆಯಾದ್ಯಂತ ಪಸರಿಸಿ, ನೈರ್ಮಲ್ಯ, ಶುಚಿತ್ವ, ಗ್ರಾಮಾಭಿವೃದ್ಧಿ ಕಾರ್ಯಗಳೊಂದಿಗೆ ಮಾನವ ಕುಲದ ಏಕತೆಗಾಗಿ, ಜಾತ್ಯತೀತ ಸಮಾಜದ ಮೂಲಕ ಎಲ್ಲರಲ್ಲಿ ಸಂಬಂಧಗಳನ್ನು ಬೆಸೆ ಯುವ ಕೆಲಸವನ್ನು ಸರ್ವೋದಯ ಸಮಿತಿ ಮಾಡುತ್ತಿದೆ. ಸರ್ವರನ್ನು ಒಗ್ಗೂಡಿಸಿಕೊಂಡು ಅಹಿಂದ ಮಾರ್ಗದಲ್ಲಿ ಎಲ್ಲರೂ ಪ್ರಾಮಾಣಿಕ ತನದಿಂದ ಕಾರ್ಯ ನಿರ್ವಹಿಸ ಬೇಕಾಗಿದೆ ಎಂದು ಸರ್ವೋದಯ ಸಮಿತಿ ಅಧ್ಯಕ್ಷÀ ಟಿ.ಪಿ. ರಮೇಶ್ ತಿಳಿಸಿದ್ದಾರೆ.

ಗಾಂಧಿ ಮಂಟಪದಲ್ಲಿ ಇರುವ ಗಾಂಧಿ ಪುತ್ಥಳಿಯನ್ನು ಸರ್ವೋದಯ ಸಮಿತಿ ಸ್ಥಾಪಿಸಿದ್ದು, ಅದು ಶಿಥಿಲಾವಸ್ಥೆಯಲ್ಲಿದ್ದು, ದಾನಿಗಳಿಂದ ಪ್ರಾಯೋಜಕತ್ವ ಪಡೆದು ಮಾರ್ಬಲ್ ಕಲ್ಲಿನಲ್ಲಿ ನೂತನ ಪುತ್ಥಳಿಯನ್ನು ನಿರ್ಮಿಸಲು ಸಮಿತಿ ಮುಂದಾಗಲಿದೆ ಎಂದರು.

ಸಭೆಯಲ್ಲಿ ಕರಡು ಬೈಲಾ ನಿಯಮಾವಳಿಗಳ ಬಗ್ಗೆ ಚರ್ಚೆ ನಡೆದು ನಂತರ ನೂತನ ಕಾರ್ಯಕಾರಿ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು. ಸಮಿತಿಗೆ ನೂತನ ಅಧ್ಯಕ್ಷರಾಗಿ ಹಿರಿಯ ಸದಸ್ಯ ಅಂಬೆಕಲ್ ಕೆ. ಕುಶಾಲಪ್ಪ ಅವರನ್ನು ನಿರ್ಗಮಿತ ಅಧ್ಯಕ್ಷ ಟಿ.ಪಿ. ರಮೇಶ್ ಸೂಚಿಸಿದರು. ಎಸ್.ಐ. ಮುನೀರ್ ಅಹಮ್ಮದ್ ಮತ್ತು ಕೋಡಿ ಚಂದ್ರಶೇಖರ್ ಅನುಮೋದಿಸಿದರು.

ಉಪಾಧ್ಯಕ್ಷರಾಗಿ ಟಿ.ಎಂ. ಮುದ್ದಯ್ಯ, ಪ್ರಧಾನ ಕಾರ್ಯದರ್ಶಿ ಯಾಗಿ ಮುನೀರ್ ಅಹಮ್ಮದ್, ಕಾರ್ಯದರ್ಶಿಯಾಗಿ ಕೆ.ಟಿ. ಬೇಬಿ ಮಥ್ಯೂ, ಕೋಶಾಧಿಕಾರಿ ಯಾಗಿ ಕೋಡಿ ಚಂದ್ರಶೇಖರ್ ಆಯ್ಕೆ ಗೊಂಡರು. ಗೌರವ ಸಲಹೆಗಾರರಾಗಿ 14 ಮಂದಿ ಆಯ್ಕೆಗೊಂಡರು.

ಕಾರ್ಯಕಾರಿ ಸಮಿತಿಗೆ ನಿರ್ದೇಶಕರುಗಳಾಗಿ ಸುರಯ್ಯ ಅಬ್ರಾರ್, ಚುಮ್ಮಿ ದೇವಯ್ಯ, ಎಂ.ಎಂ. ಲಿಯಾಖತ್ ಅಲಿ, ಕೆ.ಯು. ಅಬ್ದುಲ್ ರಜಾಕ್, ಆರ್.ಪಿ. ಚಂದ್ರಶೇಖರ್ ಅವರುಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಿರ್ಗಮಿತ ಅಧ್ಯಕ್ಷರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿ ಸಿದರು. ನೂತನ ಅಧ್ಯಕ್ಷ ಎ.ಕೆ. ಕುಶಾಲಪ್ಪ ಮಾತನಾಡಿ, ಸರ್ವ ಸದಸ್ಯರ ಸಹಕಾರದೊಂದಿಗೆ ಕಾರ್ಯ ನಿರ್ವಹಿಸುವದಾಗಿ ಹೇಳಿದರು.