ವೀರಾಜಪೇಟೆ, ಅ. 25: ಮೀನು ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ನಿಗದಿತ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಮೀನು ಮಾರಾಟ ಮಾಡಿದ್ದು, ಪರಸ್ಪರ ಕಾದಾಟಕ್ಕೆ ಕಾರಣವಾದ ಘಟನೆ ಮೀನು ಮಾರುಕಟ್ಟೆಯಲ್ಲಿ ನಡೆದಿದೆ.
ಸುಣ್ಣದ ಬೀದಿಯ ಹಸಿ ಮೀನು ಮಾರುಕಟ್ಟೆಯ ವ್ಯಾಪಾರಿಗಳಾದ ಹನೀಫ್ ಮತ್ತು ಸಲೀಂ ಇಬ್ಬರು ಅಸ್ಪತ್ರೆಯಲ್ಲಿ ದಾಖಲಾದ ಗಾಯಾಳುಗಳು.
ಮಾರುಕಟ್ಟೆಯ ಮಳಿಗೆ ಸಂಖ್ಯೆ 02 ರಲ್ಲಿ ಮೀನು ಕೇರಳದಿಂದ ತಡವಾಗಿ ಆಗಮಿಸಿತ್ತು. ತುಸು ತಾಸಿನ ಮುಂಚಿತವಾಗಿ ಮಳಿಗೆ 08 ರಲ್ಲಿ ಆಗಮಿಸಿದ ಮೀನು ಪೆಟ್ಟಿಗೆಗಳನ್ನು ಸನಿಹದ ಮಳಿಗೆಯೊಂದರಲ್ಲಿ ಇರಿಸಲಾಗಿತ್ತು. ಮೀನು ಪೆಟ್ಟಿಗೆಗಳನ್ನು ತೆಗೆಯುವಂತೆ ಹನೀಫ್ ಅವರು ಪಟ್ಟಣ ಪಂಚಾಯಿತಿ ಮತ್ತು ಪೊಲೀಸ್ ಇಲಾಖೆಗೆ ದೂರು ನೀಡಿದ್ದರು. ಪಟ್ಟಣ ಪಂಚಾಯಿತಿ ಸಿಬ್ಬಂದಿ ಮೀನು ಪೆಟ್ಟಿಗೆಗಳನ್ನು ತೆರವುಗೊಳಿಸಿದ್ದರು. ಮಳಿಗೆ 8ರ ಪಾಲುದಾರ ಮತ್ತು ಮಾಲೀಕರು ಪ.ಪಂ. ಕಚೇರಿಗೆ ಆಗಮಿಸಿ ಮುಖ್ಯಾಧಿಕಾರಿಗಳೊಂದಿಗೆ ಮಾಹಿತಿ ಬಯಸಿದರು. ಮೀನು ಕೊಳ್ಳಲು ಮುಗಿಬಿದ್ದು ಮೀನು ಖರೀದಿಸಿದರು. ವ್ಯಾಪಾರವು ಹೆಚ್ಚಿನ ರೀತಿಯಲ್ಲಿ ಅಗುತ್ತಿರುವದು ಮನಗಂಡ ಮಳಿಗೆ 8ರ ಎಂ.ಡಿ. ಸಲೀಂ. ಮತ್ತು ಡಿ. ಸಲೀಂ ಹನೀಫನೊಂದಿಗೆ ಕಡಿಮೆ ಬೆಲೆಗೆ ಮಾರಾಟ ಮಾಡದಂತೆ ಮಾತಿಗಿಳಿದು ಪರಸ್ಪರ ಕಾದಾಟಕ್ಕೆ ಕಾರಣವಾಯಿತು ಪರಿಣಾಮ ಹನೀಫ್‍ಗೆ ಮುಖದ ಭಾಗದಲ್ಲಿ ರಕ್ತಸಿಕ್ತ ಗಾಯಗಳಾದವು. ಅದೇ ರೀತಿ ಸಲೀಂಗೆ ಗಾಯಗಳಾದವು. ವಿಷಯ ತಿಳಿದು ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಉಭಯ ಮಳಿಗೆಗಳ ವ್ಯಾಪಾರಿಗಳಾದ ಹನೀಫ, ಎಜಾಜ್ ಅಹಮ್ಮದ್, ಹಮೀದ್, ಎಂ.ಡಿ ಸಲೀಂ ಮತ್ತು ಡಿ.ಸಲೀಂ ಅವರ ಮೇಲೆ ಪೊಲೀಸ್ ಕಾಯ್ದೆ 324, 506 ಐ.ಪಿ.ಸಿ ,ಡಬ್ಯು/ಎಸ್ 34 ಐ.ಪಿ.ಸಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.