ಮಡಿಕೇರಿ, ಅ. 25: ಭಾರೀ ಗಾಳಿ, ಮಳೆಗೆ ಮರದ ಕೊಂಬೆ ಬಿದ್ದು ಹುದಿಕೇರಿ ಹೋಬಳಿ ಪರಕಟಗೇರಿ ಗ್ರಾಮದ ನಿವಾಸಿ, ಕುಪ್ಪಣಮಾಡ ಪೂಣಚ್ಚ (63) ಅವರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಇಂದು ಬೆಳಿಗ್ಗೆ 11 ಗಂಟೆಗೆ ಪತ್ನಿ ಯೊಂದಿಗೆ ತೋಟ ದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮರದ ಕೊಂಬೆ ಪೂಣಚ್ಚ ಅವರ ಮೇಲೆ ಬಿದ್ದಿದೆ. ಕೂಡಲೇ ಪೊನ್ನಂಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮೈಸೂರಿಗೆ ಕರೆದೊಯ್ಯುತ್ತಿದ್ದ ಸಂದರ್ಭ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.