ಮಡಿಕೇರಿ, ಅ. 25: ಗೋವಾದಿಂದ ತರಲ್ಪಡುವ ಮದ್ಯವನ್ನು ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಬಳಸುವಂತಿಲ್ಲ. ಹಾಗೆ ಬಳಸಿದರೆ ಅಂತಹ ಕಲ್ಯಾಣ ಮಂಟಪಗಳ ಮಾಲೀಕರ, ವ್ಯವಸ್ಥಾಪಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಬಕಾರಿ ಜಿಲ್ಲಾಧಿಕಾರಿ ಬಿಂದುಶ್ರೀ ಮುನ್ನೆಚ್ಚರಿಕೆಯಿತ್ತಿದ್ದಾರೆ.
ಇತ್ತೀಚೆಗೆ ಅಬಕಾರಿ ಆದೇಶವೊಂದು ಹೊರಬಿದ್ದ ಹಿನ್ನೆಲೆಯಲ್ಲಿ ಪ್ರಶ್ನಿಸಿದಾಗ ಅವರು ಈ ಬಗ್ಗೆ ಸ್ಪಷ್ಟ ಮಾಹಿತಿಯಿತ್ತರು.ಇತ್ತೀಚೆಗೆ ವೀರಾಜಪೇಟೆಯ ಅನೇಕ ಮದ್ಯ ಮಾರಾಟಗಾರರು ಈ ಕುರಿತು ಇಲಾಖೆಗೆ ದೂರು ನೀಡಿದ್ದಾರೆ. ಇದರಿಂದಾಗಿ ತಮಗೆ ವ್ಯಾಪಾರ ವಹಿವಾಟಿಗೂ ಧಕ್ಕೆಯುಂಟಾಗಿರುವದಾಗಿ ಹೇಳಿ ಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ಮಫ್ತಿಯಲ್ಲಿ ಅಬಕಾರಿ ಸಿಬ್ಬಂದಿ ಇಂತಹ ಸಮಾರಂಭಗಳಲ್ಲಿ ಗೋವಾದ ಮದ್ಯ ಬಳಸಲ್ಪಡಲಾಗುತ್ತ್ತಿದೆಯೇ ಎಂಬದನ್ನು ಪರಿಶೀಲಿಸಿ ಪತ್ತೆಯಾದರೆ ಕ್ರಮ ಕೈಗೊಳ್ಳಲಾಗುತ್ತದೆ.
(ಮೊದಲ ಪುಟದಿಂದ) ಅಲ್ಲದೆ, ಗೋವಾ ವiದ್ಯದÀ ಹೆಸರಿನಲ್ಲಿ ನಕಲಿ ಮದ್ಯವೂ ಮಾರಾಟಗೊಳ್ಳಬಹುದಾದ ಸಾಧ್ಯತೆಯಿದ್ದು ಅದನ್ನೂ ಕೂಲಂಕಶವಾಗಿ ಪರಶೀಲಿಸಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ವಿವಾಹ ಸಮಾರಂಭವನ್ನು ಏರ್ಪಡಿಸುವ ಕುಟುಂಬಗಳ ವಿರುದ್ಧ ಯಾವದೇ ಕ್ರಮವಿಲ್ಲ. ಕಲ್ಯಾಣ ಮಂಟಪಗಳ ವ್ಯವಸ್ಥಾಪಕರ ವಿರುದ್ಧ ಮಾತ್ರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಖಚಿತಪಡಿಸಿದರು.
ಈ ನಡುವೆ, ರಕ್ಷಣಾ ಇಲಾಖೆಯಿಂದ ನಿವೃತ್ತ ಯೋಧರಿಗೆ ಸರಬರಾಜು ಮಾಡುವ ಮದ್ಯವನ್ನು ಸಮಾರಂಭಗಳಲ್ಲಿ ಬಳಸಬಾರದು ಎಂದು ‘ವಾಟ್ಸಾಪ್’ ಸಂದೇಶದಲ್ಲಿ ಹರಿದಾಡುತ್ತಿರುವ ಕುರಿತು ಕೇಳಿದಾಗ ಅಂತಹ ಯಾವದೇ ಆದೇಶ ಹೊರಡಿಸಿಲ್ಲ. ರಕ್ಷಣಾ ಇಲಾಖಾ ಮದ್ಯದ ಅಸಲಿ ಮದ್ಯ ಬಳಕೆಗೆ ಯಾವದೇ ನಿರ್ಬಂಧವಿಲ್ಲ. ಆದರೆ, ಗೋವಾ ಮದ್ಯ ಅಥವಾ ಇನ್ಯಾವದೇ ಹೆಸರಿನಲ್ಲಿ ನಕಲಿ ಮದ್ಯ ಮಾರಾಟ ಮಾಡಿ ಅದನ್ನು ಮದುವೆ ಅಥವ ಇನ್ನಿತರ ಸಮಾರಂಭಗಳಲ್ಲಿ ಬಳಸಿದರೆ ಅದನ್ನು ಸೇವಿಸಿದವರ ಆರೋಗ್ಯಕ್ಕೆ ಹಾನಿಯುಂಟಾದರೆ ದುರಂತಗಳಿಗೆ ಕಾರಣವಾಗಬಹುದು. ಈ ಹಿನ್ನೆಲೆಯಲಿ ಕ್ರಮ ಕೈಗೊಳ್ಳಲು ಮುಂಜಾಗರೂತೆ ವಹಿಸಲಾಗಿದೆÉ ಎಂದು ಬಿಂದುಶ್ರೀ ನುಡಿದರು.
ಈ ಬೆಳವಣಿಗೆ ಕುರಿತು ಮಡಿಕೇರಿಯ ಮದ್ಯಮಾರಾಟ ಪ್ರಮುಖರಾದ ಬಬ್ಬು ಅಪ್ಪಚ್ಚು ಅವರನ್ನು “ಶಕ್ತಿ” ಸಂಪರ್ಕಿಸಿದಾಗ ಇಂದಿನ ಪರಿಸ್ಥಿತಿಯಲ್ಲಿ ಗೋವಾದಿಂದ ಬರುವಂತಹ ಮದ್ಯ ಮಾರಾಟವನ್ನು ನಿಯಂತ್ರಿಸುವ ಅಗತ್ಯವಿದೆÉ ಎಂದು ಹೇಳಿದರು. ಇಂದಿನ ಪರಿಸ್ಥಿತಿಯಲ್ಲಿ ಕಳೆದೆರಡು ವರ್ಷಗಳ ಪ್ರಾಕೃತಿಕ ವಿಕೋಪ,ಈಗಲೂ ಮುಂದುವರಿಯುತ್ತಿರುವ ಮ¼ಯಿಂದಾಗಿ ಮದ್ಯ ಮಾರಾಟವೂ ಕೂಡ ಶೇ. 50 ರಿಂದ 60 ರವರೆಗೆ ಕಡಿಮೆಯಾಗಿ ನೆಲಕಚ್ಚುತ್ತಿದೆ ಎಂದರು. ಕಾಫಿ, ಕರಿಮೆಣಸು ಬೆಳೆ ನಾಶ, ಬೆಲೆ ಕಡಿಮೆಯಿಂದಾಗಿ ಮದ್ಯ ಮಾರಾಟವೂ ಕುಸಿತಗೊಂಡಿದೆ. ಕಾರ್ಮಿಕ ವರ್ಗ ಖರೀದಿಸುವ ಕಡಿಮೆ ಗುಣ ಮಟ್ಟದ ಕಡಿಮೆ ದರದ ಮದ್ಯಕ್ಕೆ ಬೇಡಿಕೆಯಿದೆ. ಹೆಚ್ಚು ಮೌÀಲ್ಯದ ಮದ್ಯ ಮಾರಾಟ ತೀರಾ ಕ್ಷೀಣಗೊಳ್ಳುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಇಲಾಖೆ ನಮಗೆ ಮಾರಾಟದ ಗುರಿ ನಿಗದಿಪಡಿಸುತ್ತದೆ ಆದರೆ ಇಂದಿನ ಪರಿಸ್ಥಿತಿಯಲ್ಲಿ ಆ ಗುರಿ ತಲುಪಲು ಕಷ್ಟ ಸಾಧ್ಯವಾಗುತ್ತಿದೆ ಎಂದು ನುಡಿದರು.