ಕರಿಕೆ, ಅ.25: ಕರಾವಳಿ ಭಾಗದಲ್ಲಿ ವಾಯುಭಾರ ಕುಸಿತದಿಂದಾಗಿ ಕಳೆದೆರಡು ದಿನಗಳಿಂದ ಕರಿಕೆ ಭಾಗದಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು ಇದರಿಂದಾಗಿ ಗ್ರಾಮಸ್ಥರು ಆತಂಕಕ್ಕಿಡಾಗಿದ್ದಾರೆ.
ಗ್ರಾಮದಲ್ಲಿ ಈ ಬಾರಿ ಸುರಿದ ಸತತ ಮಳೆಯಿಂದಾಗಿ ರೈತರ ಫಸಲು ನೆಲಕಚ್ಚಿದ್ದು,ಇದೀಗ ಅನಿರೀಕ್ಷಿತ ಬಿರುಗಾಳಿ ಮಳೆಯಿಂದಾಗಿ ಅಡಿಕೆ,ರಬ್ಬರ್, ಬಾಳೆ, ಗೇರುಬೆಳೆ ಮತ್ತೆ ಧರೆಗುರುಳಿದ್ದು ಒಂದು ಕಡೆಯಿಂದ ಬೆಲೆಕುಸಿತದ ಬರೆ ಇನ್ನೊಂದು ಕಡೆ ಫಸಲು ನಷ್ಟದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಸರಕಾರ ಕೂಡಲೇ ಬೆಳೆಪರಿಹಾರ ವಿತರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.