ಮಡಿಕೇರಿ, ಅ. 25: ಕ್ರೀಡಾ ಕೂಟಗಳು ಪ್ರತಿಭೆ ತೋರ್ಪಡಿಸಲು ಒಂದು ಉತ್ತಮ ಅವಕಾಶವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ ಹೇಳಿದರು.ಜಿ.ಪಂ., ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಬೋಯಿಕೇರಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಇವುಗಳ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಸಾಯಿ ಟರ್ಫ್ ಮೈದಾನದಲ್ಲಿ ಏರ್ಪಡಿ¸ Àಲಾಗಿರುವ ರಾಜ್ಯಮಟ್ಟದ ಬಾಲಕ - ಬಾಲಕಿಯರ ಹಾಕಿ ಪಂದ್ಯಾವಳಿ ಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಟೋಟಗಳಲ್ಲಿ ಪಾಲ್ಗೊಳ್ಳಲು ಇಲ್ಲಿನ ವಾತಾವರಣ ಹಿತವಾಗಿದೆ. ಕ್ರೀಡಾಪಟುಗಳು ಶಿಸ್ತು ಪಾಲನೆಯೊಂದಿಗೆ ಆಟವಾಡಿ ರಾಷ್ಟ್ರೀಯ (ಮೊದಲ ಪುಟದಿಂದ) ಮಟ್ಟದಲ್ಲೂ ಪಾಲ್ಗೊಳ್ಳುವಂತಾಗಬೇಕು; ತೀರ್ಪುಗಾರರ ತೀರ್ಪಿಗೆ ಬದ್ಧರಾಗಿ ಪ್ರತಿನಿಧಿಸುತ್ತಿರುವ ತಂಡ, ಜಿಲ್ಲೆ, ದೇಶಕ್ಕೆ ಕೀರ್ತಿ ತರುವಂತೆ ಹಾರೈಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಿ.ಎಸ್. ಮಚ್ಚಾಡೋ ಮಾತನಾಡಿ, ಕೊಡಗು ಹಾಕಿಯ ತವರೂರು. ಇಲ್ಲಿನ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಆಡಬೇಕೆಂದು ಹೇಳಿದರು. ಮಾನವ ಜೀವನದಲ್ಲಿ ಕ್ರೀಡೆ ಉತ್ತಮ ಪಾತ್ರ ವಹಿಸುತ್ತದೆ. ದೇಹ ಸದೃಢವಾಗಿದ್ದರೆ ಮನಸ್ಸು ಸದೃಢವಾಗಿರುತ್ತದೆ. ಸೋಲಿನಲ್ಲೂ ಸಮಚಿತ್ತದೊಂದಿಗೆ ಆಡಿ ಉತ್ತಮ ನೆನಪನ್ನು ಕೊಂಡೊಯ್ಯುವಂತೆ ಕರೆ ನೀಡಿದರು. ಕೆದಕಲ್ ಗ್ರಾ.ಪಂ. ಅಧ್ಯಕ್ಷ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ಭವ್ಯ, ವೀರಾಜಪೇಟೆ ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಮಡಿಕೇರಿ ತಾ.ಪಂ. ಸದಸ್ಯ ಅಪ್ರು ರವೀಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ದೈಹಿಕ ಶಿಕ್ಷಣ ಪರಿವೀಕ್ಷಕ ಪೊನ್ನಚನ ಶ್ರೀನಿವಾಸ್, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಬಿ. ರವಿ, ಸಾಯಿ ಸಹಾಯಕ ನಿರ್ದೇಶಕಿ ರಮಾಮಣಿ, ಉತ್ತಯ್ಯ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ದೈಹಿಕ ಶಿಕ್ಷಣಾಧಿಕಾರಿ ಎಸ್.ಟಿ. ವೆಂಕಟೇಶ್ ಸ್ವಾಗತಿಸಿದರೆ, ವರದರಾಜ್ ನಿರೂಪಿಸಿ, ವಂದಿಸಿದರು.
ಪಂದ್ಯಾಟಗಳ ವಿವರ
ಇಂದು ನಡೆದ 14 ವರ್ಷದೊಳಗಿನ ಬಾಲಕರ ಪಂದ್ಯಾವಳಿಯಲ್ಲಿ ಕಲಬುರ್ಗಿ ತಂಡ ಬೆಂಗಳೂರು ತಂಡವನ್ನು 7-0 ಗೋಲಿನಿಂದ ಸೋಲಿಸಿತು. ಮೈಸೂರು ತಂಡ ಬೆಳಗಾವಿ ತಂಡವನ್ನು 9-1 ಗೋಲಿನಿಂದ ಸೋಲಿಸಿತು. ಮೈಸೂರಿನ ಆಕರ್ಷ್ ಬಿದ್ದಪ್ಪ 5 ಗೋಲು ಬಾರಿಸಿ ಗಮನ ಸೆಳೆದರು. ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ತಂಡ ಬೆಂಗಳೂರು ತಂಡವನ್ನಿ 1-0 ಗೋಲಿನಿಂದ ಸೋಲಿಸಿದರೆ, ಮೈಸೂರು ತಂಡ ಕಲಬುರ್ಗಿ ತಂಡವನ್ನು 15-0 ಗೋಲುಗಳ ಭಾರೀ ಅಂತರದಿಂದ ಸೋಲಿಸಿತು. ಮೈಸೂರು ತಂಡದ ಸೌಮ್ಯ 6 ಗೋಲು ಬಾರಿಸಿದರೆ, ಸಿಂಚನರಾಜ್ 3, ರಶ್ಮಿ 4 ಗೋಲು ಬಾರಿಸಿ ಗಮನ ಸೆಳೆದರು. 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಕೂಡಿಗೆ ತಂಡವು ಬೆಂಗಳೂರು ಹೈಸ್ಕೂಲ್ ತಂಡವನ್ನು 4-0 ಗೋಲಿನಿಂದ ಸೋಲಿಸಿತು. ಬೆಳಗಾವಿ ಹಾಗೂ ಬೆಂಗಳೂರು ತಂಡಗಳ ನಡುವಿನ ಪಂದ್ಯ 2-2 ಗೋಲುಗಳಿಂದ ಸಮವಾಯಿತು. ಮೈಸೂರು ತಂಡ ಕಲಬುರ್ಗಿ ತಂಡವನ್ನು 12-2 ಗೋಲುಗಳ ಭಾರೀ ಅಂತರದಿಂದ ಸೋಲಿಸಿತು. ಮೈಸೂರು ಪರ ಬಿಪಿನ್ 4, ಗೌರವ್ 3 ಗೋಲು ದಾಖಲಿಸಿ ಗಮನ ಸೆಳೆದರು. ಬಾಲಕಿಯರ ವಿಭಾಗದಲ್ಲಿ ಕೂಡಿಗೆ ತಂಡ ಕಲಬುರ್ಗಿ ತಂಡವನ್ನು 11-0 ಗೋಲುಗಳ ಭಾರೀ ಅಂತರದಿಂದ ಸೋಲಿಸಿತು. ಕೂಡಿಗೆಯ ತನುಶ್ರೀ ಹಾಗೂ ಅನನ್ಯ ತಲಾ 3 ಗೋಲು ಗಳಿಸಿ ಗಮನ ಸೆಳೆದರು.