ಗೋಣಿಕೊಪ್ಪಲು, ಅ. 24: ಗೋಣಿಕೊಪ್ಪ ರೋಟರಿ ಕ್ಲಬ್, ಅಪೋಲೋ ಬಿಜಿಎಸ್ ಆಸ್ಪತ್ರೆ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷ ಕಾಡ್ಯಮಾಡ ನೇವಿನ್ ಅಧ್ಯಕ್ಷತೆಯಲ್ಲಿ ಉಚಿತ ಹೃದಯ ರೋಗ ತಪಾಸಣಾ ಶಿಬಿರ ಗೋಣಿಕೊಪ್ಪ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯಿತು. ನಗರದ ಸುತ್ತಮುತ್ತಲಿನ ಗ್ರಾಮದ ಜನತೆ ಇದರ ಪ್ರಯೋಜನ ಪಡೆದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅಪೋಲೋ ಬಿಜಿಎಸ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಂಗಸ್ವಾಮಿ, ಮನುಷ್ಯ ಆರೋಗ್ಯವಂತನಾಗಿ ಮೇಲ್ನೋಟಕ್ಕೆ ಕಂಡರೂ ಶರೀರದಲ್ಲಿ ಖಾಯಿಲೆಗಳು ಹಾಗೆಯೇ ಉಳಿದುಕೊಂಡಿರುತ್ತದೆ. ಆರೋಗ್ಯವಂತರು ವರ್ಷಕ್ಕೊಮ್ಮೆ ಪರೀಕ್ಷೆ ಮಾಡಿಕೊಳ್ಳುವ ಮೂಲಕ ತಮ್ಮ ಶರೀರದಲ್ಲಿ ಅಡಗಿರುವ ಖಾಯಿಲೆಗಳಿಗೆ ಆರಂಭದಲ್ಲಿಯೇ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.

ರೊಟೇರಿಯನ್ ಡಾ. ಚಂದ್ರಶೇಖರ್ ಮಾತನಾಡಿ, ಗೋಣಿಕೊಪ್ಪ ರೋಟರಿ ಆರೋಗ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ. ಇದರಿಂದ ಮನುಷ್ಯ ಪ್ರತಿ ದಿನ ಲವಲವಿಕೆಯಿಂದ ಇರಲು ಅವಕಾಶವಾಗಲಿದೆ ಎಂದರು.

ಗೋಣಿಕೊಪ್ಪ ವೈದ್ಯರಾದ ಡಾ. ಗ್ರೀಷ್ಮ ಬೋಜಮ್ಮ, ಡಾ. ಸುರೇಶ್, ಅಪೋಲೋ ಆಸ್ಪತ್ರೆಯ ವೈದ್ಯರಾದ ಡಾ. ಶಹನಾಜ್, ಪಿ.ಆರ್.ಒ. ರಾಕೇಶ್, ರೋಟೇರಿಯನ್ ಟಿ.ಯು. ನರೇಂದ್ರ, ಅಜ್ಜಿಕುಟ್ಟಿರ ಸಜನ್, ಪ್ರಮೋದ್ ಕಾಮತ್, ರಾಜಶೇಖರ್, ಡಾ. ಆಶಿಕ್ ಚಂಗಪ್ಪ, ಕಾರ್ಯದರ್ಶಿ ತಾಣಚ್ಚಿರ ಬಿ. ಪೂಣಚ್ಚ, ಪೂಣಚ್ಚ ಪಿ.ಬಿ., ಎಂ.ಎಂ. ಗಣಪತಿ, ಕೆ.ಪಿ. ಚಿಣ್ಣಪ್ಪ, ಪವಿತ್ರ ನೇವಿನ್, ಶುಭಾಷಿಣಿ ಕುಮಾರ್, ಡೀನಾ ಎಂ.ಕೆ. ಅನೀಶ್ ಮಾದಪ್ಪ, ಸಾಯಿ ಶಂಕರ್ ಇಂಟರ್ಯಾಕ್ಟ್ ಕ್ಲಬ್‍ನ ವಿದ್ಯಾರ್ಥಿಗಳಾದ ಶಾನಿಯ, ವಂಶಿತ, ಕೃಷ್ಮ, ರೂಪಶ್ರೀ, ರಚನಾ, ಶೈನಿ ಮುತ್ತಮ್ಮ, ಶಿಕ್ಷಕರಾದ ವೀಣಾ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.