ಚೆಟ್ಟಳ್ಳಿ, ಅ. 24: ರಾಜಸ್ಥಾನದ ಅಜ್ಮೀರ್‍ನಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ 17 ವರ್ಷದೊಳಗಿನ ಬಾಲಕಿಯರ ಫುಟ್ಬಾಲ್ ಪಂದ್ಯಾವಳಿಗೆ ಕೊಡಗು ಜಿಲ್ಲೆಯ ಒಂಭತ್ತು ಮಂದಿ ಆಟಗಾರರು ಆಯ್ಕೆಯಾಗಿದ್ದಾರೆ.

ಗೋಣಿಕೊಪ್ಪಲು ಲಯನ್ಸ್ ಶಾಲೆಯ ವಿದ್ಯಾರ್ಥಿನಿಯರಾಗಿರುವ ಇವರು ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಲಯನ್ಸ್ ಶಾಲೆಯ ತಂಡ ಅತ್ಯುತ್ತಮ ಪ್ರದರ್ಶನ ತೋರಿದ ಹಿನ್ನೆಲೆ ರಾಜ್ಯ ತಂಡಕ್ಕೆ ಒಂಭತ್ತು ಆಟಗಾರರನ್ನು ಇದೇ ಶಾಲೆಯಿಂದ ಆಯ್ಕೆ ಮಾಡಲಾಗಿದೆ. ಜಿಲ್ಲಾ ತಂಡ, ಮೈಸೂರು ವಿಭಾಗೀಯ ತಂಡಕ್ಕೆ ತರಬೇತುದಾರರಾಗಿದ್ದ ಲಯನ್ಸ್ ಶಾಲೆಯ ದೈಹಿಕ ಶಿಕ್ಷಕ ಈಶ್ವರ್ ರಾಜ್ಯ ತಂಡಕ್ಕೂ ತರಬೇತುದಾರರಾಗಿದ್ದಾರೆ. ಸ್ಕೂಲ್ ಫೆಡರೇಷನ್ ಆಫ್ ಇಂಡಿಯಾ ಈ ಪಂದ್ಯಾವಳಿ ಆಯೋಜಿಸಿದೆ.