ವೀರಾಜಪೇಟೆ, ಅ. 23: ಪ.ಪೂ. ಶಿಕ್ಷಣ ಇಲಾಖೆ ಕೊಡಗು ಜಿಲ್ಲೆ ಹಾಗೂ ವಿಜಯಲಕ್ಷ್ಮಿ ಪ.ಪೂ. ಕಾಲೇಜು ಇವರ ವತಿಯಿಂದ ತಾ. 6 ಮತ್ತು 11 ರಂದು ಸಂತ ಅನ್ನಮ್ಮ ಕಾಲೇಜು, ವೀರಾಜಪೇಟೆ ಮತ್ತು ಕಾವೇರಿ ಕಾಲೇಜು ಗೋಣಿಕೊಪ್ಪದಲ್ಲಿ ನಡೆಸಿದ ವೀರಾಜಪೇಟೆ ತಾಲೂಕು ಕ್ರೀಡಾಕೂಟದಲ್ಲಿ ಪೊನ್ನಂಪೇಟೆಯ ಸಂ.ಅಂ.ಪ.ಪೂ.ಕಾ.ನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ಪಡೆದು ಕೊಂಡಿದ್ದಾರೆ.