ನಾಪೆÇೀಕ್ಲು, 23: ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ತೊಲೆಯಾರ್ 10 ಎ ಚಂಗ್ರಾಂದಿ ಹಬ್ಬವು ತಾ. 27 ರಂದು ನಡೆಯಲಿದೆ ಎಂದು ದೇವಾಲಯದ ತಕ್ಕ ಮುಖ್ಯಸ್ಥ ಪರದಂಡ ಕುಟುಂಬಸ್ಥರು ತಿಳಿಸಿದ್ದಾರೆ. ಅಂದು ತುಲಾ ಭಾರ ಸೇವೆ, ಮಹಾ ಪೂಜೆ, ಮತ್ತಿತರ ಸೇವೆಗಳು ನಡೆಯಲಿದ್ದು, ನಿತ್ಯ ಪೂಜೆಯ ನಂತರ ದೇವರ ನೃತ್ಯ ಬಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.