ನಾಪೋಕ್ಲು, ಅ. 23. ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡ ನಮ್ಮ ಬಹುದೊಡ್ಡ ನಿಧಿಯಾಗಿದ್ದು ಅವರು ವೀರಮರಣ ಹೊಂದಿದ ದಿನ ತಾ. 31ರಂದು ಮಡಿಕೇರಿಯಲ್ಲಿ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗುವದು ಎಂದು ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಹೇಳಿದರು. ಪಾರಾಣೆ ಕೇಂದ್ರ ಶ್ರೀವೆಂಕಟರಮಣ ಸ್ವಾಮಿ ಗೌಡ ಸಮಾಜದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಸೋಮಣ್ಣ ಸುಬೇದಾರ್ ಅಪ್ಪಯ್ಯ ಗೌಡ ಕೆಚ್ಚೆದೆಯ ಹೋರಾಟಗಾರ ಅವರ ಸ್ಮರಣೆಗೆ ಅವರ ಹೆಸರನ್ನು ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೇ ನಿಲ್ದಾಣಕ್ಕೆ ನಾಮಕರಣ ಮಾಡುವ ನಿಟ್ಟಿನಲ್ಲಿ ನವೆಂಬರ್ 9ರಂದು ಚಾಮರಾಜಪೇಟೆ ಸಾಹಿತ್ಯ ಭವನದಲ್ಲಿ ಒಕ್ಕಲಿಗರ ಸಭೆಯನ್ನು ಆಯೋಜಿಸಿದೆ ಎಂದರು. ಅರೆಭಾಷಾ ಅಕಾಡೆಮಿ ಸಮಾಜದ ಆಚಾರ ವಿಚಾರ ಸಂಸ್ಕøತಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಿರಿಕಿರಿಯರು ಒಟ್ಟು ಸೇರಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಇದಕ್ಕೆ ಒಕ್ಕೂಟದ ಸಂಪೂರ್ಣ ಸಹಕಾರ ಇದೆ ಎಂದ ಅವರು ನಮ್ಮ ಸಮಾಜದ ಪದ್ಧತಿ, ಪರಂಪರೆಗೆ ಧಕ್ಕೆಯಾಗದಂತೆ ನಡೆದುಕೊಳ್ಳುವ ಮೂಲಕ ಇತರರಿಗೂ ಗೌರವ ಕೊಟ್ಟು ಪರಸ್ಪರ ಸಹಬಾಳ್ವೆಯಿಂದ ಬದುಕು ವಂತಾಗಬೇಕು ಎಂದರು.
ಸಮಾರಂಭದಲ್ಲಿ ಸ್ಪೋಟ್ರ್ಸ್ ಅಡ್‍ಮಿನಿಸ್ಟ್ರೇಟರ್ ಆಫ್ ಇಂಡಿಯಾ ಪ್ರಶಸ್ತಿ ಪುರಸ್ಕøತ ನಿವೃತ್ತ ಶಿಕ್ಷಕ ಕಟ್ರತನ ಬೆಳ್ಯಪ್ಪ ಅವರನ್ನು ಸಮಾಜದ ವತಿಯಿಂದ ಸನ್ಮಾನಿಸಿ ಅವರ ಜೀವನ ಚರಿತ್ರೆ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಬಳಿಕ ಮಾತನಾಡಿದ ಅವರು ತಾವು ನಡೆದು ಬಂದ ದಾರಿ ಹಾಗೂ ಜೀವನ ಅನುಭವವನ್ನು ಹಂಚಿಕೊಂಡರು. ಕೂಡಕಂಡಿ ದೇವಿಪ್ರಸಾದ್ ಅವರ ಪತ್ನಿ ಪುಷ್ಪ ಅವರು ಅನಾರೋಗ್ಯ ಪೀಡಿತರಾಗಿದ್ದು, ಈ ಸಂದರ್ಭ ಸಮಾಜದಿಂದ ರೂ. 5000 ಸಹಾಯ ಹಸ್ತವನ್ನು ನೀಡಲಾಯಿತು.
ಸಭೆಯಲ್ಲಿ ಮೃತಪಟ್ಟ ಸಮಾಜದ ಸದಸ್ಯರಿಗೆ ಸಂತಾಪ ಬಳಿಕ ವರದಿ ಅಂಗೀಕಾರ ನಡೆಯಿತು. ಸಮಾಜದ ಕಟ್ಟಡ ಅಭಿವೃದ್ಧಿ, ಸಮಾಜದ ಧ್ಯೇಯೋದ್ದೇಶ ಕುಂದುಕೊರತೆಗಳ ಬಗ್ಗೆ ಚರ್ಚಿಸಿ ಒಮ್ಮತದ ನಿರ್ಧಾರ ಕೈಗೊಳ್ಳಲಾಯಿತು. ಸಮಾಜದ ಅಧ್ಯಕ್ಷ ಮುಕ್ಕಾಟಿರ ಪುಟ್ಟುಕುಶಾಲಪ್ಪ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷೆ ತೋಟಂಬೈಲು ಕಾವೇರಮ್ಮ, ಜಂಟಿ ಕಾರ್ಯದರ್ಶಿ ಚಂಡೀರ ಕೆ. ವಿಜಯಕುಮಾರ, ಖಜಾಂಚಿ ಕೆ.ಯು. ಬಾಲಕೃಷ್ಣ, ಉಸ್ತುವಾರಿ ಕುಟ್ಟನ ಬಿ.ದಿನೇಶ್, ನಿರ್ದೇಶಕರಾದ ಪೊಕ್ಕುಳಂಡ್ರ ಪಿ. ಸತ್ಯ, ಇಗ್ಗುಡ ಅಯ್ಯಣ್ಣ, ಪೊನ್ನಚನ ಮೋಹನ, ಬಿಟ್ಟೀರ ಪಿ. ಪ್ರೇಮಕುಮಾರಿ, ಪೊನ್ನಚನ ಎಚ್. ಅನಿತಾ ಉಪಸ್ಥಿತರಿದ್ದರು.
ಪೊನ್ನಚನ ಯಶೋಧ ನಾಣಯ್ಯ ಪ್ರಾರ್ಥಿಸಿದರು. ಗೌರವ ಕಾರ್ಯದರ್ಶಿ ದೇವಜನ ಎಸ್.ಧನೇಶ್ ವಂದಿಸಿದರು.