ಮಡಿಕೇರಿ, ಅ. 22: ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ ಶಾಲೆಯ 17 ವಯೋಮಿತಿ ಒಳಗಿನ ಬಾಲಕ ಹಾಗೂ ಬಾಲಕಿಯರ ಹಾಕಿ ತಂಡ ಬಾಗಲಕೋಟೆಯಲ್ಲಿ ನಡೆದ ದಕ್ಷಿಣ ವಲಯ ಹಾಕಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿ ಉತ್ತರ ಪ್ರದೇಶದಲ್ಲಿ ನ. 14 ರಿಂದ ನಡೆಯುವ ರಾಷ್ಟ್ರಮಟ್ಟದ ಪಂದ್ಯಾಟಕ್ಕೆ ಆಯ್ಕೆ ಆಗಿದೆ. ಶಾಲೆಯ ಸಿ.ಇ.ಓ. ವಿದ್ಯಾಹರೀಶ್, ಕ್ರೀಡಾಧ್ಯಕ್ಷ ರಘು ಮಾದಪ್ಪ ನೇತೃತ್ವದಲ್ಲಿ ಬಾಲಕರ ತಂಡದ ಕೋಚ್ ಆಗಿ ದಿನೇಶ್ ಹಾಗೂ ದಾಮೋದರ್, ಬಾಲಕಿಯರ ತಂಡದ ಕೋಚ್ ಆಗಿ ಸ್ವಪ್ನ ಕಾರ್ಯನಿರ್ವಹಿಸುತ್ತಿದ್ದಾರೆ.