ಮಡಿಕೇರಿ, ಅ. 21: ತಾ. 29 ಹಾಗೂ ತಾ. 30 ರಂದು ಬಿಳಿಗೇರಿ ಗ್ರಾಮದ ಶ್ರೀ ಅರ್ಧನಾರೀಶ್ವರ ದೇವಾಲಯದಲ್ಲಿ ಮುಖ ಮಂಟಪವನ್ನು ನೂತನವಾಗಿ ನಿರ್ಮಿಸಲು ಪ್ರಾರಂಭಿಸುವ ಸಲುವಾಗಿ ಕ್ಷೇತ್ರದಲ್ಲಿ ಶ್ರೀ ನೀಲೇಶ್ವರ ಉಚ್ಚಿಲತಾಯ ಪದ್ಮನಾಭ ತಂತ್ರಿ ಇವರುಗಳಿಂದ ಸುದರ್ಶನ ಹೋಮ ಹಾಗೂ ಅನುಜ್ಞಾ ಕಲಶಾದಿಗಳನ್ನು ನೆರವೇರಿಸಲು ನಿಶ್ಚಯಿಸಲಾಗಿದೆ.
ತಾ. 29 ರಂದು ಸಂಜೆ 6.30 ರಿಂದ ಸುದರ್ಶನ ಹೋಮ, ಆಹ್ಯಾನೆ, ಉಚ್ಚಾಟನೆ. ತಾ. 30 ರಂದು ಬೆಳಿಗ್ಗೆ 7 ರಿಂದ 12 ಗಂಟೆಯವರೆಗೆ ತೆಂಗಿನಕಾಯಿ ಗಣಪತಿ ಹೋಮ, ಅನುಜ್ಞಾ ಕಲಶ ಪೂಜೆ, ಧ್ಯಾನ ಸಂಕೋಚಾರಿ ಕ್ರಿಯೆಗಳು ಮತ್ತು ಪ್ರಸಾದ ವಿತರಣೆ. ತಾ. 29 ರ ರಾತ್ರಿ ಮತ್ತು ತಾ. 30ರ ಮಧ್ಯಾಹ್ನ ಅನ್ನದಾನದ ಕಾರ್ಯಕ್ರಮಗಳು ಜರುಗಲಿವೆ.