ಮಡಿಕೇರಿ, ಅ. 21 : 2019-20ನೇ ಸಾಲಿನ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯು ಇಂದು ಪೂರ್ವಾಹ್ನ 10-30 ಗಂಟೆಗೆ ಗ್ರಾ.ಪಂ.ಯ ಆವರಣದಲ್ಲಿ ಪಂ. ಅಧ್ಯಕ್ಷೆ ಕೆ. ಕೆ. ಜಯಂತಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ನೋಡಲ್ ಅಧಿಕಾರಿ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾ ಅಧಿಕಾರಿ ಇವರ ಉಪಸ್ಥಿತಿಯಲ್ಲಿ ನಡೆಯಲಿದೆ.

2019-20ನೇ ಸಾಲಿನ ಜಮಾಬಂಧಿ ಗ್ರಾ. ಸಭೆಯು ಇಂದು ಅಪರಾಹ್ನ 12-30 ಗಂಟೆಗೆ ಗ್ರಾಮ ಪಂಚಾಯಿತಿಯ ಆವರಣದಲ್ಲಿ ಪಂಚಾಯ್ತಿ ಅಧ್ಯಕ್ಷೆ ಕೆ. ಕೆ. ಜಯಂತಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ನೋಡಲ್ ಅಧಿಕಾರಿ ಶ್ರೀಕಂಠಯ್ಯ ಅವರ ಉಸ್ತುವಾರಿಯಲ್ಲಿ ನಡೆಯಲಿದೆ.

2019-20ನೇ ಸಾಲಿನ ಜಿ.ಪಿ.ಡಿ.ಪಿ. ಗ್ರಾಮ ಸಭೆಯು ತಾ. 31 ರಂದು ಪೂರ್ವಾಹ್ನ 11 ಗಂಟೆಗೆ ಗ್ರಾ. ಪಂ.ಯ ಆವರಣದಲ್ಲಿ ಪಂ. ಅಧ್ಯಕ್ಷೆ ಕೆ. ಕೆ. ಜಯಂತಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ನೋಡಲ್ ಅಧಿಕಾರಿ ಶ್ರೀಕಂಠಯ್ಯ ಅವರ ಉಸ್ತುವಾರಿಯಲ್ಲಿ ನಡೆಯಲಿದೆ.