ಗುಡ್ಡೆಹೊಸೂರು, ಅ. 20: ಇಲ್ಲಿಗೆ ಸಮೀಪದ ಹೊಸಪಟ್ಟಣ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ದೇವಸ್ಥಾನದಲ್ಲಿ ನ. 6 ರಂದು ಕೊಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳಿಂದ ಆಶೀರ್ವಚನ ನಡೆಯಲಿದೆ. ನ. 8 ರಂದು ದಿವ್ಯಸಾನ್ನಿಧ್ಯ ಹಾಗೂ ದೇವಸ್ಥಾನ

ಲೋಕಾರ್ಪಣೆ ಕಾರ್ಯವನ್ನು ಶ್ರೀ ಕಳಂಚೇರಿ ಮಠ ಅರಮೇರಿಯ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು ನೆರವೇರಿಸಲಿದ್ದಾರೆ.

ಈ ಸಂದರ್ಭ ಶ್ರೀ ತೋಂಟದಾರ್ಯ ಸಂಸ್ಥಾನ ಮಠ ಬಸವಪಟ್ಟಣದ ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮಿಗಳು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಮಹಾಸ್ವಾಮಿಗಳು, ಪೂಜಾಕಾರ್ಯದಲ್ಲಿ ತೋರೆನೂರಿನ ಮಲ್ಲೇಶ ಸ್ವಾಮಿಗಳು, ದಿಂಡುಗಾಡಿನ ಅಪ್ಪಾಜಿ ಸ್ವಾಮಿಗಳು ಮತ್ತು ಮನೇಹಳ್ಳಿಯ ಮಹಾಂತ ಶಿವಲಿಂಗ ಸ್ವಾಮಿಗಳು ನಡೆಸಲಿದ್ದಾರೆ. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನ ಸಮಿತಿಯ ಅಧ್ಯಕ್ಷ ಹೆಚ್.ಎಸ್. ಪೂರ್ಣಿಮ ಶಿವಕುಮಾರ್ ವಹಿಸಲಿದ್ದಾರೆ.